ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉತ್ತಮ ಓದಿನಿಂದ ಜೀವನ ಉತ್ತಮವಾಗಿ ರೂಪಿಸಬಹುದು. ಹಾಗೂ 17 ವರ್ಷದ ನಿಮ್ಮ ಓದು ಜೀವನದ ದೃಷ್ಟಿಕೋನವನ್ನೇ ಬದಲಿಸುತ್ತದೆ ಎಂದು ಪಿಇಎಸ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ನಾಗರಾಜ್ ಹೇಳಿದರು.
ಪಿಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾಣಿಜ್ಯ ವಿಭಾಗದ ಫೋರಂ ಉದ್ಘಾಟನೆ ಮತ್ತು ಕಾಮರ್ಸ್ ವಸ್ತುಪ್ರದರ್ಶನ ಕಾರ್ಯಕ್ರಮ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿ, ಪಿಯುಸಿ ನಂತರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ನೆಡಸಬೇಕು ಎಂದು ಸಲಹೆ ನೀಡಿದರು.
Also read: ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಇಬ್ಬರು ಆರೋಪಿಗಳು ಶಿವಮೊಗ್ಗ ಜೈಲಿಗೆ
ಪಿ ಇ ಎಸ್ ಕಾಲೇಜಿನ ಪ್ರಾಚಾರ್ಯ ಪ್ರೊ. ಎ ನಾಗರಾಜ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಸಂಯೋಜಕ ಗಣೇಶ್ ನಾಗ್ ಕಾಮರ್ಸ್ ಫೋರಂನ ಉದ್ದೇಶವನ್ನು ವಿವರಿಸಿದರು.
ಉಪನ್ಯಾಸಕಿ ಶೃತಿ ವಾಡಪ್ಪಿ ನಿರೂಪಿಸಿದರು. ಸುಪ್ರೀಯ ಸ್ವಾಗತಿಸಿದರು. ಭಾಸ್ಕರ್ ವಂದನಾರ್ಪಣೆ ನೆಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post