ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲವಗೊಪ್ಪ ಕೆರೆಗೆ ಹಾಗೂ ಸ್ಮಶಾನಕ್ಕೆ ಹೋಗುವ ರಸ್ತೆ ಕಾಮಗಾರಿ ವಿಚಾರದಲ್ಲಿ ಮಹಾಪೌರರು ಹಾಗೂ ಬಿಜೆಪಿಯ ಮುಖಂಡರಿಂದ ಸ್ಥಳಿಯ ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ್ ವಿರುದ್ದ ಸುಳ್ಳು ಆರೋಪ ಮಾಡಲಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಹೇಳಿದ್ದಾರೆ.
ಅವರು ಇಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಸದಸ್ಯರೊಂದಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳಿಂದ ಸತ್ಯ ಸತ್ಯತೆಯ ಮಾಹಿತಿ ಪಡೆದರು.
ಶಿವಮೊಗ್ಗ ನಗರದ ವಾರ್ಡ್ ನಂ:16ರ ಮಲವಗೊಪ್ಪ ವಾರ್ಡಿನ ನಾಗರೀಕರು ಹಲವಾರು ವರ್ಷಗಳಿಂದ ಮಲವಗೊಪ್ಪ ಕೆರೆ ಹಾಗೂ ಸ್ಮಶಾನಕ್ಕೆ ಹಾದೂ ಹೋಗುವ ರಸ್ತೆಯನ್ನು ಡಾಂಬರೀಕರಣ ಮಾಡಿಸಬೇಕೆಂದು ಬೇಡಿಕೆಯ ಮನವಿಯಂತೆ ಸ್ಥಳಿಯ ಮಹಾನಗರ ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ್ ವಾರ್ಡ್ ಅಭಿವೃದ್ದಿ ಯೋಜನೆಯಲ್ಲಿ 2022-2023ನೇ ಸಾಲಿನ 15ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ ಮಲವಗೊಪ್ಪ ಕೆರೆ ಮತ್ತು ಸ್ಮಶಾನಕ್ಕೆ ಹಾದೂ ಹೋಗುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಕಾಮಗಾರಿ ಕೆಲಸವು ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ವಾರ್ಡಿನ ಬಿ.ಜೆ.ಪಿ ಪಕ್ಷದ ಪ್ರಮುಖರು ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಆಯುಕ್ತರಿಗೆ ಸುಳ್ಳು ಮಾಹಿತಿಯನ್ನು ನೀಡಿದ್ದರು ಎಂದು ಆರೋಪಿಸಿದರು.
Also read: ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ಧರಿಸಿದ್ದ ಕೈಮಗ್ಗದ ಸೀರೆ ರೂಪಿಸಿದ್ದು ಯಾರು ಗೊತ್ತಾ?
ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಕೆಲ ಜನ ಪ್ರತಿನಿಧಿಗಳು ತರಾತುರಿಯಲ್ಲಿ ಅಭಿವೃದ್ದಿ ವಿಚಾರದಲ್ಲೂ ದ್ವೇಷ ರಾಜಕರಣ ಮೈಗೂಡಿಸುಕೊಂಡು ಮಹಾಪೌರರನ್ನು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಕಾಮಗಾರಿ ಸ್ಥಗಿತಗೊಳಿಸಿ ವಾರ್ಡಿನ ಕಾಂಗ್ರೆಸ್ ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ್ ವಿರುದ್ದ ಸುಳ್ಳು ಆರೋಪ ಮಾಡಿದ್ದಾರೆ ಎಂದರು.
ಸ್ಥಳೀಯ ನಾಗರಿಕರು ಮಾತನಾಡಿ, ಈಗಾಗಲೇ ಮಲವಗೊಪ್ಪ ವಾರ್ಡಿನಲ್ಲಿ ಹಾದು ಹೋಗುವ ಬಿ.ಹೆಚ್. ರಸ್ತೆ ಅಗಲೀಕರಣವಾಗುತ್ತಿರುವುದರಿಂದ ಜೊತೆಗೆ ಈ ರಸ್ತೆಯೂ ಹೈವೆ ರಸ್ತೆಯಾಗಿದ್ದು, ವಾಹನ ಸಂಚಾರ ದಟ್ಟಣೆಯಾಗಿರುವುದರಿಂದ ಮಲವಗೊಪ್ಪ ಕೆರೆಗೆ ಹಾದು ಹೋಗುವ ರಸ್ತೆಯಲ್ಲಿಯೇ ಗ್ರಾಮದಲ್ಲಿ ಮರಣ ಹೊಂದಿದ ಶವಗಳನ್ನು ಸ್ಮಶಾನಕ್ಕೆ ಇದೇ ಮಾರ್ಗವಾಗಿ ಕೊಂಡೊಯುತ್ತಾ ಬಂದಿದ್ದು ನಮ್ಮೆಲ್ಲಾ ನಾಗರಿಕರ ಹಲವು ವ?ಗಳ ಮನವಿಯಂತೆ ರಸ್ತೆ ಡಾಂಬರೀಕರಣ ಕಾಮಗಾರಿಯೂ ನಡೆಯುತ್ತಿತ್ತು. ಆದರೆ ಕಳೆದ 10 ರಿಂದ 15 ದಿನಗಳ ಹಿಂದೆ ಏಕಾಏಕಿ ಪಾಲಿಕೆ ಮಹಾಪೌರರು ಹಾಗೂ ಅಧಿಕಾರಿಗಳ ವರ್ಗ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸಲು ಕಾರಣವೇನೆಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪುನರ್ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೆಹೆಕ್ ?ರೀಫ್, ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್ಕ್, ಹೆಚ್.ಸಿ.ಯೋಗೀಶ್ವರ್, ಬಿ.ಎ.ರಮೇಶ್‌ಹೆಗ್ಡೆ, ಮುಖಂಡರಾದ ಕೆ.ರಂಗನಾಥ್, ರಂಗೇಗೌಡ, ವಾರ್ಡಿನ ನಾಗರೀಕರಾದ ಆನಂದ್ ನಾಯ್ಕ್, ವಸಂತ ನಾಯ್ಕ್, ವಕೀಲರಾದ ಶಾಂತ್ ಕುಮಾರ್, ಚಿಕ್ಕಣ್ಣ, ಗಂಗಾದರ, ರವಿ, ಹಾಗೂ ಇನ್ನಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















