ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಂತಿ, ಸುವ್ಯವಸ್ಥೆ ಹಾಗೂ ಸಹಬಾಳ್ವೆಯಿಂದಿರುವ ರಾಜ್ಯದಲ್ಲಿ ಕೆಲವು ಮತೀಯ ಸಂಘಟನೆಗಳು ಮಕ್ಕಳಲ್ಲಿ ವಿಷಬೀಜ ಬಿತ್ತುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕಾರ್ಯ ಮಾಡುತ್ತಿವೆ ಸಂಸದ ಬಿ.ವೈ. ರಾಘವೇಂದ್ರ #MP Raghavendra ಕಿಡಿ ಕಾರಿದ್ದಾರೆ.
ಪ್ರವಾಸಿ ಮಂದಿರದಲ್ಲಿಂದು ಮಾತನಾಡಿದ ಅವರು, ರಾಜಕಾರಣ ಮಾಡಲು ಬೇರೆ ವಿಷಯವಿಲ್ಲದೇ ಹಿಜಾಬ್ #Hijab ಮತ್ತು ಈಶ್ವರಪ್ಪನವರ ಈ ವಿಷಯವನ್ನು ಇಟ್ಟುಕೊಂಡು ಶೈಕ್ಷಣಿಕವಾಗಿ ಮತ್ತು ಉದ್ಯೋಗದಲ್ಲಿ ಇರುವ ಸಾಮರಸ್ಯವನ್ನು ಹಾಳು ಮಾಡುವುದರೊಂದಿಗೆ ಇವುಗಳಿಗೆ ಧಕ್ಕೆಯಾಗುವ ಪ್ರಕ್ರಿಯೆ ಕಳೆದ 8,10, ದಿನಗಳಿಂದ ನಡೆಯುತ್ತಿದೆ ಎಂದು ದೂರಿದರು.
Read also: ಹಿಜಾಬ್, ಬುರ್ಕಾ ಪುರುಷರ ದಬ್ಬಾಳಿಕೆಯ ಸಂಕೇತ: ತಸ್ಲೀಮಾ ನಸ್ರೀನ್ ಹೇಳಿಕೆ
ಶಾಂತಿಗೆ ಹೆಸರಾದಂತ ಕರ್ನಾಟಕಕ್ಕೆ ಒಂದು ಕಪ್ಪುಚುಕ್ಕೆ ಇಡುವಂಥ ವಾತಾವರಣ ಸೃಷ್ಟಿಯಾಗುತ್ತಿದೆ. ಅನೇಕ ರಾಜಕೀಯ ಪಕ್ಷಗಳು ಮುಖಂಡರು ಒಬ್ಬರ ನಂತರ ಒಬ್ಬರು ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಹೇಳಿಕೆ ನೀಡುತ್ತಿದ್ದಾರೆ. ನಮ್ಮ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಎಲ್ಲರೂ ಕೂಡ ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯಿಂದ, ಸಾಮರಸ್ಯದಿಂದ ತೆಗೆದುಕೊಂಡು ಹೋಗುತ್ತಿದೆ. ಆದರೆ ಇದನ್ನು ಸಹಿಸದ ಕೆಲವರು ಪ್ರಚೋದಿಸುವುದರೊಂದಿಗೆ ಹಿಜಾಬ್ ವಿಷಯದಲ್ಲಿ ಅವರಿಗೆ ಆಕ್ರೋಶದಿಂದ ಪ್ರಚೋದಿಸುವ ಪ್ರಯತ್ನ ಕೆಲವು ಮುಖಂಡರಿಂದ ಆಗುತ್ತಿದೆ ಎಂದಿದ್ದಾರೆ.
ಅಲ್ಲದೇ, ಶಾಂತಿಗೆ ಭಂಗ ತರುವವರಿಗೆ ಶಭಾಸ್’ಗಿರಿ ಕೊಡುವ ಪ್ರಯತ್ನ ನಡೆಯುತ್ತಿದೆ. ಎಲ್ಲೋ ಒಂದು ಕಡೆ ಇದರ ಬೇರು ತುಂಬಾ ಆಳವಾಗಿ ಹಬ್ಬಿಸುವಂಥ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ಚರ್ಚೆಗಳು ಆಗುತ್ತಿವೆ. ಅನೇಕ ಸಾಕ್ಷಿಗಳು ಸಿಗುತ್ತಿದ್ದು, ವಿಶೇಷವಾಗಿ ಪಿಎಫ್‌ಐ ಸಂಘಟನೆ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಬೇಕಾಗಿರುವ ಎಲ್ಲಾ ಸಾಕ್ಷಿಗಳು ಸಿಗುತ್ತಿದ್ದು, ಸಂಘಟನೆಯು ಇದರ ಬಗ್ಗೆ ಗಮನ ಹರಿಸುತ್ತಿದೆ. ಆ ಮುಗ್ಧ ವಿದ್ಯಾರ್ಥಿನಿಯರ, ವಿದ್ಯಾರ್ಥಿಗಳ ಮನಸ್ಸನ್ನು ಈ ಸಂಘಟನೆ ಹಾಳು ಮಾಡಲು ಹೊರಟಿದೆ ಎಂದು ಕಿಡಿ ಕಾರಿದರು.
Read also: ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬುದು ನಮ್ಮ ಆಗ್ರಹ: ಡಿ.ಕೆ. ಶಿವಕುಮಾರ್
ಇನ್ನು, ಮತೀಯ ಕೆಲವು ಸಂಸ್ಥೆಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಮಾಡುತ್ತಿವೆ. ವಿರೋಧ ಪಕ್ಷದವರಿಗೆ ರಾಜಕಾರಣ ಮಾಡಲು ಬೇರೆ ವಿಷಯವೇ ಸಿಗುತ್ತಿಲ್ಲ. ಆದರೆ ಈ ಒಂದು ವಿಷಯವನ್ನು ಇಟ್ಟುಕೊಂಡು ವ್ಯವಸ್ಥೆಯನ್ನು ಹಾಳು ಮಾಡಲು ಈ ರೀತಿಯ ವರ್ತನೆಗಳನ್ನು ಮಾಡಲಾಗುತ್ತಿದೆ. ನಾನು ಈ ಸಂದರ್ಭದಲ್ಲಿ ಇತರೆ ರಾಜಕೀಯ ಪಕ್ಷಗಳ, ವಿರೋಧ ಪಕ್ಷದ ಮುಖಂಡರಿಗೆ ಮನವಿ ಮಾಡುತ್ತೇನೆ. ಹಿಜಾಬ್ ವಿಷಯ ಮತ್ತು ಈಶ್ವರಪ್ಪನವರ #Eshwarappa ಹೆಸರನ್ನು ಇಟ್ಟುಕೊಂಡು ಈ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣ ಮಾಡಬೇಡಿ. ಅಧಿವೇಶನ ನಡೆಯುತ್ತಿದ್ದು, ಒಂದು ವಾರ ಮಾತ್ರ ಇದೆ. ಇದಕ್ಕೋಸ್ಕರನೇ ಅಮೂಲ್ಯವಾದ ಸಮಯವನ್ನು ಹಾಳು ಮಾಡಬೇಡಿ. ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಅನುವು ಮಾಡಿಕೊಡಿ. ಯಾವುದೇ ಒಬ್ಬ ನಮ್ಮ ಬಿಜೆಪಿಯ ಮುಖ್ಯಮಂತ್ರಿಯಾಗಲಿ ಮತ್ತು ನಮ್ಮ ಸಂಘಟನೆಯಾಗಲಿ ಯಾರೂ ಕೂಡ ಈ ರೀತಿಯ ವಿಷಯಗಳಿಗೆ ದಾರಿ ಮಾಡಿಕೊಟ್ಟಿಲ್ಲ, ಕೊಡುವುದೂ ಇಲ್ಲ. ಮತ್ತೊಮ್ಮೆ ವಿವಿಧ ರಾಜಕೀಯ ಪಕ್ಷದವರಿಗೆ ನಮ್ಮ ಪಕ್ಷದ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು, ಉತ್ತಮವಾಗಿ ಅಧಿವೇಶನವನ್ನು ನಡೆಸಲು ಸಹಕರಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಮೇಯರ್ ಸುನಿತಾ ಅಣ್ಣಪ್ಪ, ನಗರಾವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಎಸ್.ಎಸ್. ಜ್ಯೋತಿಪ್ರಕಾಶ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post