ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಿಂದ ಪ್ರತಿ ವರ್ಷ ಸಾವಿರಾರು ಜನರು ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ #Om Shakthi Temple ಮಾಲೆ ಧರಿಸಿ ಡಿಸೆಂಬರ್ ತಿಂಗಳಿನಿಂದ ಜನವರಿ ತಿಂಗಳ ವರೆಗೆ ಪ್ರಯಾಣ ಮಾಡುತ್ತಾರೆ. ಆದ್ದರಿಂದ, ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸುವಂತೆ ಕೆ.ಆರ್. ಪುರಂ ಭಾರತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಪವಿತ್ರ ವಿನೋದ ಅವರ ನೇತೃತ್ವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗದಿಂದ ತಮಿಳುನಾಡಿಗೆ ಪ್ರಯಾಣ ಮಾಡಲು ಕೆ.ಎಸ್.ಆರ್.ಟಿ.ಸಿ ಬಸ್ಸಿನ ವ್ಯವಸ್ಥೆ ಮಾಡಿಕೊಂಡು ಹೋಗುವವರು ದೂರದ ಪ್ರಯಾಣವಾದ್ದರಿಂದ ಆನೇಕ ತೊಂದರೆಗೆ ಒಳಗಾಗುತ್ತಾರೆ. ವಯೋಮಿತಿ ಇಲ್ಲದೆ ಮಾಲೆ ಧರಿಸಿ ಹೋಗುವ ಭಕ್ತರಿಗೆ ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗದಿಂದ ಮೇರ್‍ಮರವತ್ತೊರು ಓಂ ಶಕ್ತಿ ದೇವಸ್ಥಾನಕ್ಕೆ ಮಾಲೆ ಧರಿಸುವ ತಿಂಗಳಿನಲ್ಲಿ ಪ್ರಯಾಣ ಬೆಳೆಸಲು ವಿಶೇಷ ರೈಲನ್ನು ಕಲ್ಪಿಸಿಕೊಟ್ಟಲ್ಲಿ ಯಾತ್ರಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಆದ ಕಾರಣ ದಯಮಾಡಿ ಇದನ್ನು ಪರಿಶೀಲಿಸಿ ರೈಲಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪದ್ಮಮ್ಮ, ಚನ್ನಮ್ಮ, ಸಂಗೀತ, ರಮ್ಯ, ಸವಿತ, ವಿನೋದ್, ಮಮತಾ, ಮಂಜುಳಾ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















