ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಂದಿಗೂ ಎಲ್ಲ ಸಂಸ್ಕೃತಿಯನ್ನು ಗೌರವಿಸಿ, ಆದರೆ ನಮ್ಮ ಸಂಸ್ಕೃತಿಯಲ್ಲಿಯೇ ಜೀವಿಸಿ ಎಂದು ಖ್ಯಾತ ವೈದ್ಯರು ಹಾಗೂ ಉಪನ್ಯಾಸಕರಾದ ಡಾ.ಕೆ.ಪಿ. ಪುತ್ತೂರಾಯ ಕರೆ ನೀಡಿದರು.
ಪೇಸ್ ಪದವಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರೇರಣೆ ನೀಡುವ ಪ್ರಜ್ಞಾ ವಾಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಸಂಸ್ಕೃತಿಯನ್ನೂ ಗೌರವಿಸಿ. ಆದರೆ ನಮ್ಮ ಸಂಸ್ಕೃತಿಯಲ್ಲಿಯೇ ಜೀವಿಸಿ. ಏಕೆಂದರೆ ಧೀಮಂತ ಸಂಸ್ಕೃತಿ ಎಂದರೆ ಭಾರತೀಯ ಸಂಸ್ಕೃತಿ ಈ ಸಂಸ್ಕೃತಿಯಲ್ಲಿ ಹೇಳಿದ ಪ್ರಮುಖ ಅಂಶಗಳೆಂದರೆ ಪರೋಪಕಾರ ಮಾಡು ಅದು ಪುಣ್ಯದ ಕೆಲಸ. ಇತರರಿಗೆ ಉಪಕಾರ ಮಾಡು ಮಾಡಿದ್ದನ್ನು ಮರೆತು ಬಿಡು.ಆದರೆ ಇತರರು ನಿನಗೆ ಮಾಡಿದ ಉಪಕಾರ ಮರೆಯಬೇಡ ಎಂಬುದಾಗಿದೆ ಎಂದರು.
Also read: ಹೃದಯ ವಿದ್ರಾವಕ | ಮಗ ಸಾವನ್ನಪ್ಪಿದ್ದು ತಿಳಿಯದೇ ಶವದೊಂದಿಗೆ ನಾಲ್ಕು ದಿನ ಕಳೆದ ವೃದ್ಧ ಅಂಧ ದಂಪತಿ
ಜ್ಞಾನದಲ್ಲಿ ಎರಡು ವಿಧ. ಒಂದು ಅನುಭವದ ಜ್ಞಾನ ಹಾಗೂ ಮತ್ತೊಂದು ಅಧ್ಯಯನ ಜ್ಞಾನ ಎಂಬುದಾಗಿ. ಶಾಲಾ ಕಾಲೇಜಿನ ಪಠ್ಯ ಕ್ರಮವೇ ಬೇರೆ, ಜೀವನದ ಪಠ್ಯ ಕ್ರಮವೇ ಬೇರೆ. ಶಿಕ್ಷಣ ಎಂದರೆ ಶಾಲಾ ಕಾಲೇಜುಗಳಲ್ಲಿ ದೊರೆಯುವುದು ಅಷ್ಟೇ ಅಲ್ಲ. ಜೀವನವೇ ಒಂದು ಶಿಕ್ಷಣ. ವಿದ್ಯಾರ್ಥಿಗಳು ಭತ್ತ ತುಂಬಿದ ಚೀಲಗಳಾಗಬಾರದು ಭತ್ತ ಬೆಳೆಯುವ ಗದ್ದೆಗಳಾಗಬೇಕು ಎಂಬ ಕುವೆಂಪು ರವರ ಮಾತಿನಂತೆ ಆಗಬೇಕು ಎಂದರು.
ವಿದ್ಯಾರ್ಥಿಗಳು ಅವರವರ ಮನೆಯ ನಂದಾದೀಪಗಳು. ಹಾಗಾಗಿ ಒಳ್ಳೆಯದನ್ನೇ ಮಾಡಬೇಕು ಇಲ್ಲವಾದಲ್ಲಿ ಮಾಡಬಾರದ್ದು. ಮಾಡಿದರೆ ಆಗಬಾರದ್ದು ಆಗುತ್ತದೆ. ಇವುಗಳನ್ನು ರಾಮಾಯಣ ಮಹಾಭಾರತದ ಸಂದೇಶಗಳು ನಮಗೆ ನೀಡುತ್ತವೆ.ಇಲ್ಲಿ ದಾರಿತಪ್ಪಿದರೆ ಮತ್ತೆಲ್ಲಿಯೂ ಸರಿದಾರಿಗೆ ಬರಲು ಸಾಧ್ಯವಿಲ್ಲ ಎಂದರು.
ವಿದ್ಯಾರ್ಥಿಗಳಿಗೆ 10 ಕಿವಿಮಾತುಗಳನ್ನು ಹೇಳಿದ ಅವರು, ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಲವಲವಿಕೆ ಇರಬೇಕು, ಅವರು ಬ್ರಹ್ಮಚರ್ಯ ಪಾಲನೆ ಮಾಡಬೇಕು. ಜ್ಞಾನ ಸಂಪಾದನೆ ಒತ್ತುಕೊಡಬೇಕು. ಮಕ್ಕಳು ಪ್ರಾಮಾಣಿಕರಾಗಿರಬೇಕು. ಪರಿಶ್ರಮ, ಪರಧರ್ಮ ಸಹಿಷ್ಣುತೆ ಇರಬೇಕು. ಹೆತ್ತವರನ್ನು, ಓದಿದ ಕಾಲೇಜನ್ನು, ರೈತರರನ್ನು, ಸಮಾಜ, ಸೈನಿಕರನ್ನು ಮರೆಯಬಾರದು. ಏನಾದರೂ ಆಗಿ ಆದರೆ ಮೊದಲು ಒಳ್ಳೆಯ ಮನುಷ್ಯರಾಗಿ ಎಂಬ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಅಧ್ಯಜ್ಷ ಕೆ.ಎಸ್. ಈಶ್ವರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ.ಎಚ್. ಆನಂದ್ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎನ್. ವಿಶ್ವನಾಥಯ್ಯ, ಯುವ ನಾಯಕರು ಹಾಗೂ ಸಂಸ್ಥೆಯ ಖಜಾಚಿಗಳು ಕೆ.ಈ. ಕಾಂತೇಶ್ ಉಪಸ್ಥಿತರಿದ್ದರು.
ಎನ್.ಎಸ್. ಸುಮೇದ್ ಪ್ರಾರ್ಥಿಸಿ, ಸಜಯ್ ಸ್ವಾಗತಿಸಿದರು. ಸುನಿಲ್ ದತ್ ಜೋಶಿ ವಂದಿಸಿ, ಡಾ. ಎಚ್.ಎಲ್. ಮೈತ್ರೇಯಿ ಕಾರ್ಯಕ್ರಮನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post