ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಿಪ್ಪನ್‌ಪೇಟೆ: ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯ ನೀಡುವಂತೆ ಹೊಂಬುಜ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸ್ವಾಮೀಜಿಯವರು, ಭಾರತ ದೇಶದಲ್ಲಿ ಅಲ್ಪಸಂಖ್ಯಾತರ ಮೀಸಲಾಯಿತಿಯನ್ನು ಜೈನರಿಗೆ ಮೊದಲು ನೀಡಿದ್ದು ಕರ್ನಾಟಕ ರಾಜ್ಯ ಆರ್ಥಿಕವಾಗಿ ಹಿಂದುಳಿದಿರುವ ಜೈನ ಸಮಾಜ ಬಾಂಧವರಿಗೆ ಸರಿಯಾಗಿ ಅನುದಾನ ಲಾಭ ದೊರೆಯುತ್ತಿಲ್ಲ. ತಾವು ಶ್ರೀಕ್ಷೇತ್ರಕ್ಕೆ ದರ್ಶನಾರ್ಥವಾಗಿ ಆಗಮಿಸಬೇಕೆಂದು ಅಪೇಕ್ಷಿಸುತ್ತೇವೆ. ತಮಗೂ ಹಾಗೂ ತಮ್ಮ ಕುಟುಂಬದವವರಿಗೂ ಶ್ರೀಕ್ಷೇತ್ರದ ಭಗವಾನ್ ಶ್ರೀಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಅನುಗ್ರಹ ಸದಾ ಇರಲೆಂದು ಇನ್ನೂ ಮುಂದೆಯೂ ತಮ್ಮಿಂದ ಅಭಿವೃದ್ಧಿಯ ಕಾರ್ಯಗಳು ನಡೆಯಲೆಂದು ಹರಸುತ್ತೇವೆ ಎಂದು ಮನವಿ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಸ್ವಾಮೀಜಿಯವರು ಪ್ರಸ್ತಾಪಿಸಿರುವ ಅಂಶಗಳೇನು?
- ಶೀಘ್ರವಾಗಿ ಕರ್ನಾಟಕದಾದ್ಯಂತ ನಗರ ಪ್ರದೇಶಗಳಲ್ಲಿ 8-10 ಪ್ರತ್ಯೇಕ ಜೈನ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು
- ಅಲ್ಪಸಂಖ್ಯಾತ ಜೈನರಿಗೆ ಸಾಲ-ಸೌಲಭ್ಯಗಳು, ವಿದ್ಯಾರ್ಥಿ ವೇತನ ಇನ್ನಿತರ ಸೌಲಭ್ಯಗಳನ್ನು ಸರಿಯಾದ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು
- ಬಜೆಟ್‌ನಲ್ಲಿ ವಿಶೇಷ ನಿಧಿಯನ್ನು ಮೀಸಲಿಡಬೇಕು
- ಅಲ್ಪಸಂಖ್ಯಾತ ಇಲಾಖೆಯಲ್ಲಿ ಜೈನರಿಗೆ ಶಾಶ್ವತ ಸದಸ್ಯತ್ವ ನೀಡಬೇಕು
- ಜೈನರಿಗೂ ಅಲ್ಪಸಂಖ್ಯಾತ ಇಲಾಖೆಯಲ್ಲಿ ಉದ್ಯೋಗವಕಾಶವನ್ನು ನೀಡುಬೇಕು
- ರಾಜ್ಯದಾದ್ಯಂತ ಪ್ರಾಚೀನ ಜೈನ ಬಸದಿಗಳು, ಸ್ಮಾರಕಗಳ ರಕ್ಷಣೆಗೆ ವಿಶೇಷ ವಾರ್ಷಿಕ ಅನುದಾನ ನಿಗದಿಪಡಿಸಿ ನಿರ್ವಹಣೆಗೆ ಒಂದು ಸಮಿತಿಯನ್ನು ರಚಿಸಬೇಕು
- ಸಂಪುಟದಲ್ಲಿ ಜೈನ ಶಾಸಕರಿಗೆ, ರಾಜಕೀಯ ಪ್ರತಿನಿಧಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post