ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: 50ನೆಯ ರಾಷ್ಟ್ರೀಯ ಸುರಕ್ಷತಾ ದಿನದ ಅಂಗವಾಗಿ ಶಿವಮೊಗ್ಗ ಎಂಐಎಫ್’ಎಸ್’ಇ(ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಫೈರ್ ಅಂಡ್ ಸೇಫ್ಟಿ ಇಂಜಿನೀಯರಿಂಗ್) ವತಿಯಿಂದ ನಗರದಲ್ಲಿ ರಸ್ತೆ ಸುರಕ್ಷತೆ ಕುರಿತಾಗಿ ಜಾಗೃತಿ ಜಾಥಾ ನಡೆಸಲಾಯಿತು.
ಬಿಎಚ್ ರಸ್ತೆಯಲ್ಲಿರುವ ಎಂಐಎಫ್’ಎಸ್’ಇನಿಂದ ಬಸ್ ನಿಲ್ದಾಣದ ಬಳಿಯಿರುವ ಅಶೋಕ ವೃತ್ತದವರೆಗೂ ಜಾಗೃತಿ ಜಾಥಾ ನಡೆಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು, ಜನರಿಗೆ ತಿಳುವಳಿಕೆ ಮೂಡಿಸಿದರು.
ಸುಮಾರು 20 ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದು, ರಸ್ತೆ ಸುರಕ್ಷತೆಗಾಗಿ ಸಂಚಾರಿ ನಿಯಮಗಳ ಪಾಲನೆ, ಹೆಲ್ಮೆಟ್ ಧರಿಸುವುದು ಸೇರಿದಂತೆ ವಿವಿಧ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಎಂಐಎಫ್’ಎಸ್’ಇ ಮ್ಯಾನೇಜರ್ ವಿವೇಕ್ ಎಸ್ ಅಡಿಗ, ಪಶ್ಚಿಮ ಟ್ರಾಫಿಕ್ ಎಎಸ್’ಐ ಧನಂ, ನಂಜುಡಪ್ಪ, ಮಂಜುನಾಥ್, ಸಿಬ್ಬಂದಿಗಳಾದ ಪ್ರವೀಣ್ ಪಾಟೀಲ್, ಶಿವಮೂರ್ತಿ, ರಮೇಶ್, ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















