ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಹೊಸಬರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಮಣೆ ಹಾಕಿದ್ದಾರೆ. ಇದು ನಮಗೆ ಅಸಮಾಧಾನ ತಂದಿದೆ ಎಂದು ಸಾಗರದ ವಕೀಲ ಹಾಗೂ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಉಪಾಧ್ಯಕ್ಷ ಪ್ರವೀಣ್ ಸಾಗರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವಕೀಲರನ್ನು ಕಡೆಗಣಿಸುತ್ತಿದೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದರೂ ನಾನು ಕೂಡ ಆಕಾಂಕ್ಷಿಯಾಗಿದ್ದೆ. ಆದರೆ, ಯಾರನ್ನೂ ಸೌಜನ್ಯಕ್ಕಾಗಿಯೂ ಕೇಳಲಿಲ್ಲ. ಹೋಗಲಿ ಪಕ್ಷದ ಅಭ್ಯರ್ಥಿಯಾದ ಧನಂಜಯ ಸರ್ಜಿಯವರು ನಾಮಪತ್ರ ಸಲ್ಲಿಸುವ ವಿಷಯವನ್ನೂ ಹೇಳಲಿಲ್ಲ. ಮಾತೇ ಆಡಲಿಲ್ಲ. ನಿನ್ನೆಯವರೆಗೂ ಕಾದೆವು. ಈಗ ಬೇಸತ್ತು ನಮ್ಮ ಅಸಮಾಧಾನ ಹೊರಹಾಕುತ್ತಿದ್ದೇವೆ. ಹಾಗಂತ ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದರು.
ಬಿಜೆಪಿಯಲ್ಲಿ ಹಗಲು, ರಾತ್ರಿ ದುಡಿದ ಕಾರ್ಯಕರ್ತರನ್ನು ಅದೇಕೋ ಕಡೆಗಣಿಸಲಾಗುತ್ತಿದೆ. ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕಲಾಗುತ್ತಿದೆ. ಅದರಲ್ಲೂ ವಕೀಲರು ಇವರಿಗೆ ಬೇಡವಾಗಿದ್ದಾರೆ. ಜಾತಿ, ದುಡ್ಡಿನ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ ಎಂದು ದೂರಿದರು.
Also read: ಕಡಿಮೆ ಅಂಕ ಪಡೆದವರಿಗೂ ಸೂಕ್ತ ಪಾಠದ ಮೂಲಕ ಉತ್ತಮ ಮಾರ್ಕ್ಸ್: ಪ್ರಿಯದರ್ಶಿನಿ
ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಂತೂ ಒಬ್ಬ ಮಹಾನ್ ಭ್ರಷ್ಟರಾಗಿದ್ದಾರೆ. ಬಿಜೆಪಿಯ ಸಿ.ಟಿ. ರವಿ ಅವರನ್ನು ಸೋಲಿಸಿದವನು ಆತ. ಅವರಿಗಂತೂ ನಮ್ಮ ಬೆಂಬಲ ಇಲ್ಲವೇ ಇಲ್ಲ. ಮೇ 21ರ ನಂತರ ನಮ್ಮ ಬೆಂಬಲ ಯಾರಿಗೆ ಎಂಬುದನ್ನು ಬಹಿರಂಗಪಡಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಎನ್. ದೇವೇಂದ್ರಪ್ಪ, ಮಹೇಂದ್ರಕುಮಾರ್, ವಾಗೀಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























