ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚಿಗೆ ಸಿಟಿ ಸೆಂಟರ್ ನ ಭಾರತ್ ಸಿನೆಮಾಸ್ ಕನ್ನಡ ಚಲನಚಿತ್ರ ವೀಕ್ಷಣೆಗೆ ಸ್ವಯಂಚಾಲಿತ ಯಂತ್ರ ಮೆಟ್ಟಿಲುಗಳಲ್ಲಿ ಸಾಗುತ್ತಿದ್ದ ಮಹಿಳೆಯೋರ್ವರು ಆಯ ತಪ್ಪಿ ಬಿದ್ದಾಗ ತಕ್ಷಣವೇ ಸ್ವಿಚ್ ಆಫ್ ಮಾಡಿ ಹೆಚ್ಚಿನ ಅನಾಹುತವನ್ನು ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿದ ಅಲ್ಲಿನ ಸಿಬ್ಬಂದಿ ಸುಮಾರವರನ್ನು ಸನ್ಮಾನಿಸುವುದರ ಮೂಲಕ ಕೃತಜ್ಞತೆ ವ್ಯಕ್ತಪಡಿಸಲಾಯಿತು.
ಎಸ್ಕಲೇಟರ್’ನಲ್ಲಿ ಹತ್ತುವಾಗ ಇಳಿಯುವಾಗ ಬಹಳ ಜಾಗರೂಕರಾಗಿ ಇರುವುದು ಒಳ್ಳೆಯದು. ಪರಸ್ಪರ ಕೈ ಕೈ ಹಿಡಿದು, ಹೆಗಲ ಮೇಲೆ ಕೈ ಹಾಕಿಕೊಂಡು ತೆರಳುವುದು ಅನಾಹುತಕ್ಕೆ ಕಾರಣವಾಗಬಹುದು. ಒಂದು ವೇಳೆ ಬೀಳುವ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ತಮ್ಮ ಸೇವೆ ನಿರ್ವಹಿಸಲು ತತ್ ಕ್ಷಣ ಲಭ್ಯವಿಲ್ಲದಲ್ಲಿ ಅವಘಡದ ಪರಿಣಾಮ ಊಹಿಸಲೂ ಸಾಧ್ಯವಿಲ್ಲ.

ಈ ಸಂದರ್ಭದಲ್ಲಿ ಶಾಂತಾ ಎಸ್ ಶೆಟ್ಟಿ ಹಾಗೂ ಶೋಭಸತೀಶ್, ಜಿ.ವಿಜಯಕುಮಾರ್, ಭದ್ರಾವತಿ ವಾಸು, ಕೆ.ಎಸ್.ಮಂಜುನಾಥ್, ತ್ರಿವೇಣಿ, ಸುಶೀಲ, ರವಿ, ಮಂಜುನಾಥ್, ಶಶಿಕಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Discussion about this post