ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಎರಡು ಮಕ್ಕಳ ತಾಯಿಯೊಬ್ಬರು ಇದೇ ಮೊಟ್ಟ ಮೊದಲ ಬಾರಿಗೆ ಬಾಕ್ಸಿಂಗ್ ಎನ್’ಐಎಸ್ ಕೋಚ್ ಆಗಿ ಹೊರಹೊಮ್ಮಿದ್ದು ಈ ಮೂಲಕ ಜಿಲ್ಲೆಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಹೌದು… ಜಿಲ್ಲೆಯ ಮೀನಾಕ್ಷಿ ಎಂಬ ಬಾಕ್ಸಿಂಗ್ #Boxing ಕ್ರೀಡಾಪಟು ಈ ಸಾಧನೆ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಶಿವಮೊಗ್ಗದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಪಂಜಾಬಿನ ಪಟಿಯಾಲದಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮೇ 6 ರಿಂದ ಜುಲೈ 4 ರವರಿಗೆ ಆಯೋಜಿಸಿದ್ದ ಎನ್’ಐಎಸ್ ಕೋಚ್ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಕೋಚ್ ಹಾಗೂ ಮಹಿಳಾ ಕರಾಟೆ ಮತ್ತು ಟೆಕ್ವಂಡೋ ತರಬೇತಿದಾರೆ ಆದ ಮೀನಾಕ್ಷಿ ಭಾಗವಹಿಸಿದ್ದರು.
Also read: ಮಲೆನಾಡಿನಲ್ಲಿ ನಿರಂತರ ಮಳೆ | ಒಂದೇ ದಿನ ಶಿವಮೊಗ್ಗದ ಯಾವ ಡ್ಯಾಂಗೆ ಎಷ್ಟು ನೀರು ಹರಿದುಬಂತು?
ಬಿ ಗ್ರೇಡ್ ಪಡೆಯುವ ಮುಖಾಂತರ ಉತ್ತೀರ್ಣರಾಗಿ ಶಿವಮೊಗ್ಗ ಜಿಲ್ಲೆಯಿಂದ ಮೊದಲ ಮಹಿಳಾ ಎನ್’ಐಎಸ್ ಬಾಕ್ಸಿಂಗ್ ಕೋಚ್ ಆಗಿ ಹೊರಹೊಮ್ಮಿದ್ದಾರೆ.
ವಿಶೇಷ ಏನೆಂದರೆ, ಈ ಸಾಧಕಿ ಎರಡು ಮಕ್ಕಳ ತಾಯಿಯಾಗಿದ್ದು, ಈಗಲೂ ಇಂತಹ ಅಪ್ರಮಿತ ಸಾಧನೆ ಮಾಡಿದ್ದಾರೆ. ಇದು ರಾಜ್ಯದಲ್ಲಿ ಎನ್’ಎಎಸ್ ಬಾಕ್ಸಿಂಗ್ ಕೋಚ್ ಆಗಿರುವುದು ಆಗಿದೆ.
ಮೀನಾಕ್ಷಿ ಅವರಿಗೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದನೆ ತಿಳಿದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post