ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣ ವಿಮಾನ ನಿಲ್ದಾಣ ಅಂತಿಮ ಹಂತದಲ್ಲಿದ್ದು, ಫೆಬ್ರವರಿ ಮೊದಲನೇ ವಾರದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ ನೀಡಿದರು.
ವಿಮಾನನಿಲ್ದಾಣ ನಿರ್ಮಾಣವಾಗುತ್ತಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಲ್ದಾಣದ ರನ್ ವೇ ಕಾಮಗಾರಿ 3110 ಉದ್ದವಿದ್ದು, ಅದರ ಅಗಲ 45 ಮೀಟರ್ ಇದೆ. ಎರಡನೇ ಅತಿ ಉದ್ದದ ರನ್ ವೇ ಆಗಿದ್ದು, ಅಪ್ರೋಚ್ ರಸ್ತೆ ಪೂರ್ಣವಾಗಿದೆ. ಪೆರಿಪರಲ್ 8 ಕಿಮೀ ಪೂರ್ಣವಾಗಿದೆ. ಏಪ್ರಾನ್ ಸಹ ಪೂರ್ಣವಾಗಿದೆ ಟರ್ಮಿನಲ್ ಬಿಲ್ಡಿಂಗ್ ಅಂತಮ ಹಂತಕ್ಕೆ ಬಂದಿದೆ ಎಂದು ವಿವರಿಸಿದರು.

ಡಿಸೆಂಬರ್‌ನಲ್ಲಿ ದೆಹಲಿಗೆ ತೆರಳಿ ಉದ್ಘಾಟನಾ ದಿನಾಂಕ ನಿಗಧಿಪಡಿಸಿ ಪ್ರಧಾನಿ ಯವರಿಗೆ ಅಧಿಕೃತ ಆಹ್ವಾನ ನೀಡಲಾಗುದು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗಳಿಸಿದ ಅಧಿಕಾರಿಗಳಿಗೆ ಇದೇಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.












Discussion about this post