ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲಿಯಾಜ್ ನಗರದಲ್ಲಿ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದ ಆರೋಪಿ ಮಹಮದ್ ರಿಯಾಜ್’ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ದೊಡ್ಡ ಪೇಟೆ ಪೊಲೀಸರು ಈತನಿಂದ ಬಹಳಷ್ಟು ಮಾರಕಾಸ್ತçಗಳನ್ನು ವಶಪಡಿಸಿಕೊಂಡಿದ್ದಾರೆ.
ಅಣ್ಣಾನಗರದ ಮೊಹಮ್ಮದ್ ರಿಯಾಬ್ ಎಂಬುವವರು ದ್ವಿಚಕ್ರ ವಾಹನಗಳ ಡೀಲರ್. ರಿಯಾಬ್ ಬಳಿ ಅಜರ್ ದ್ವಿಚಕ್ರ ವಾಹನ ಖರೀದಿಸಿದ್ದು, ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ರಿಯಾಬ್’ಗೆ ಅಜರ್ ಗನ್ ತೋರಿಸಿ ಬೆದರಿಸಿ, ಹಲ್ಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಶಾದಿ ಮಹಲ್ ಬಳಿ ಅಜರ್ ನಿಂತಿದ್ದಾಗ ಬೈಕ್ ನ ಹಣವನ್ನು ಕೊಡು ಎಂದು ಮೊಹಮ್ಮದ್ ರಿಯಾಬ್ ನು ಕೇಳಿದ್ದಕ್ಕೆ, ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಅಜರ್ ನು ತನ್ನ ಬಳಿ ಇದ್ದ ಗನ್ ಹಿಂಭಾಗದಿಂದ, ತಲೆ ಮತ್ತು ಮೈ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ, ಗನ್ ತೋರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆಂದು ನೀಡಿದ ದೂರಿನ ಆಧಾರದಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಿಸಲಾಗಿತ್ತು.
ವಿಶೇಷ ತಂಡ ರಚನೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಆರೋಪಿಯನ್ನು ಪತ್ತೆ ಮಾಡಲು ವಿಶೇಷ ತಂಡ ರಚಿಸಿದ್ದರು.
ಡಿವೈಎಸ್ಪಿ ಬಾಲರಾಜ್ ಅವರ ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸೆö್ಪಕ್ಟರ್ ಅಂಜನ್ ಕುಮಾರ್, ಪಿಎಸ್’ಐ ವಸಂತ ಅವರ ನೇತೃತ್ವದಲ್ಲಿ ಎಎಸ್’ಐ ಮಂಜುನಾಥ್, ಎಎಸ್’ಐ ಚೂಡಾಮಣಿ, ಸಿಬ್ಬಂದಿ ರಮೇಶ್, ರೌಡಿ ನಿಗ್ರಹ ದಳದ ಸಿಬ್ಬಂದಿ ಹಾಲಪ್ಪ, ಮನೋಹರ್, ಗುರುನಾಯ್ಕ, ನಾಗಪ್ಪ, ಹರೀಶ್ ನಾಯ್ಕ, ವಸಂತ, ರಮೇಶ್, ಆಕಾಶ್, ಶರತ್ ಮತ್ತು ತಮ್ಮಣ್ಣ ಅವರ ವಿಶೇಷ ತಂಡವನ್ನು ರಚಿಸಿದ್ದರು.
ಕಾರ್ಯಾಚರಣೆ ನಡೆಸಿದ ವಿಶೇಷ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗನ್, ಮಾರಕಾಸ್ತ್ರ ವಶ:
ಬಂಧಿತ ಆರೋಪಿ ರಿಯಾಜ್’ನಿಂದ ಕಂಟ್ರಿ ಮೇಡ್ ಪಿಸ್ತೂಲ್, ಒಂದು ಮೇಡ್ ಇನ್ ಬೆಂಗಳೂರು ಇಂಡಿಯಾ ಏರ್ ಗನ್, ಏರ್ ಗನ್ ಗುಂಡುಗಳು, 100 ಎಂಎಲ್’ನ ಡ್ರಗ್ ಮಿಶ್ರಿತವಿರುವ ಮೋನೋಕಾಫ್ ಪ್ಲಸ್’ನ ಒಟ್ಟು 156 ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವಿಶೇಷ ತನಿಖಾ ತಂಡದ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post