ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುಡ್ಡೆಕಲ್‌ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಟ್ರಸ್ಟ್ ವತಿಯಿಂದ ಜು.28ರಂದು ಭರಣಿ ಹಾಗೂ 29ರಂದು “ಅಡಿಕೃತ್ತಿಕೆ” “ಹರೋಹರ” ಜಾತ್ರೆಯನ್ನು ಏರ್ಪಡಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಡಿ.ರಾಜಶೇಖರಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷವು ಈ ಜಾತ್ರೆಗೆ ಲಕ್ಷಾಂತರ ಭಕ್ತಾಧಿಗಳು ಹರಕೆ, ಕಾವಡಿಯನ್ನು ಸಲ್ಲಿಸಲು ಹೊರ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಬರುತ್ತಾರೆ ಎಂದರು.

Also read: ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ, ಇಷ್ಟು ವರ್ಷ ಜೈಲು ಗ್ಯಾರೆಂಟಿ | ರಾಜ್ಯ ಸರ್ಕಾರ
ಈ ವರ್ಷ ರೈಲ್ವೆ ಓವರ್ ಬ್ರಿಡ್ಜ್ ಉದ್ಘಾಟನೆಗೊಂಡಿರುವುದರಿಂದ ಜಾತ್ರೆಯಂದು ದೇವಸ್ಥಾನಕ್ಕೆ ಬರಲು ಪರ್ಯಾಯ ಮಾರ್ಗವನ್ನು ರೂಪಿಸಲಾಗಿದೆ. ದೇವಸ್ಥಾನಕ್ಕೆ ಬರುವವರು ಸೇತುವೆ ಮೇಲಿಂದ ಬರಬೇಕು. ದರ್ಶನ ಪಡೆದು ಹೊರ ಹೋಗುವವರು ಕೆಳ ರಸ್ತೆಯ ಮೂಲಕ ಅಂದರೇ ಸರ್ವಿಸ್ ರೋಡ್‌ನಲ್ಲಿ ಹೋಗಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಿ. ರಘುಕುಮಾರ್, ಎಂ. ರಾಜು, ಎಂ. ಲೋಕೇಶ್, ಟಿ. ರವಿಕುಮಾರ್, ಪಿ. ಸುಬ್ರಮಣಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Discussion about this post