ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಕಾರೊಂದರ ಮಾಲೀಕನಿಗೆ ಬರೋಬ್ಬರಿ 16,500 ದಂಡವನ್ನು ಪಶ್ಚಿಮ ಸಂಚಾರಿ ಪೊಲೀಸರು ವಿಧಿಸಿದ್ದಾರೆ.
ಇಲ್ಲಿನ ಲಕ್ಷ್ಮೀ ಮೆಡಿಕಲ್ ಎದುರು ವಾಹನ ತಪಾಸಣೆ ನಡೆಯುತ್ತಿದ್ದ ವೇಳೆಯಲ್ಲಿ ಕಾರೊಂದರ ದಾಖಲೆ ಹಾಗೂ ನಿಯಮ ಉಲ್ಲಂಘನೆಯನ್ನು ಪರಿಶೀಲಿಸಿದಾಗ ಹಲವು ಸಲ ಕಾರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ ಬೆಳಕಿಗೆ ಬಂದಿದೆ.
Also read: ಫೆ.11-16 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ರೈಲು ಕುರಿತಾಗಿ ಲೇಟೆಸ್ಟ್ ಅಪ್ಡೇಟ್
ನಗರದಲ್ಲಿ ಅಳವಡಿಸಲಾಗಿರುವ ಸ್ಮಾರ್ಟ್ ಸಿಸಿಟಿವಿ ಕ್ಯಾಮರಾಗಳು ಈ ಕಾರಿನ ಸಂಚಾರಿ ನಿಯಮ ಉಲ್ಲಂಘನೆಯ 14 ಪ್ರಕರಣಗಳನ್ನು ಫೋಟೋ ಸಮೇತ ದಾಖಲಿಸಿತ್ತು. ಒಟ್ಟಾರೆ ಕಾರಿನ ಚಾಲಕರಿಗೆ 16,500 ರೂಪಾಯಿ ದಂಡ ವಿಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post