ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಐಡಿ ಕಾರ್ಡ್ #ID Card ಇಲ್ಲದಂತೆ ವ್ಯಾಪಾರ ನಡೆಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಸರಿಯಾದ ದಾಖಲೆ ಇಲ್ಲದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಸೂಚನೆ ನೀಡಿದರು.
ಶಾಸಕರ ಕಚೇರಿಯಲ್ಲಿ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ಅವರೊಂದಿಗೆ ನೆಹರು ರಸ್ತೆ ಹಾಗೂ ಗಾಂಧಿ ಬಜಾರ್ ವರ್ತಕರ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಸಭೆಯಲ್ಲಿ ವ್ಯಾಪಾರಿಗಳು ಎದುರಿಸುತ್ತಿರುವ ವಿವಿಧ ಮೂಲಭೂತ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ನಗರದಲ್ಲಿ ಶಿಸ್ತುಪಾಲಿತ ಹಾಗೂ ಸುರಕ್ಷಿತ ವ್ಯಾಪಾರದ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ, ಈ ಕೆಳಕಂಡ ಪ್ರಮುಖ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರು:
ಏನೆಲ್ಲಾ ಸೂಚನೆ ನೀಡಿದ್ದಾರೆ?
- ಗಾಂಧಿ ಬಜಾರ್ ಕೆಲ ಕಿಡಿಗೇಡಿಗಳಿಂದ ಉಂಟಾಗುತ್ತಿರುವ ಟ್ರಾಫಿಕ್ ಅಶಿಸ್ತಿಗೆ ಸಂಬಂಧಿಸಿದಂತೆ ತಕ್ಷಣದ ನಿಗಾವಹಿಸಿ
- ಅನಧಿಕೃತವಾಗಿ ಬೇರೆ ರಾಜ್ಯಗಳಿಂದ ಬಂದಿರುವ ಕೆಲವು ವ್ಯಾಪಾರಿಗಳು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ
- ಐಡಿ ಕಾರ್ಡ್ ಇಲ್ಲದಂತೆ ವ್ಯಾಪಾರ ನಡೆಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಸರಿಯಾದ ದಾಖಲೆ ಇಲ್ಲದವರ ವಿರುದ್ಧ ಕ್ರಮ ವಹಿಸಿ
- ಅಸಮರ್ಪಕವಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಪ್ರವೃತ್ತಿ, ವ್ಯಾಪಾರ ಪ್ರದೇಶಗಳಲ್ಲಿ ಗಂಭೀರ ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ, ಪಾರ್ಕಿಂಗ್ ನಿಯಮಗಳ ಅಳವಡಿಕೆಗೆ ಆದ್ಯತೆ ನೀಡಿ
- ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಕೆಲ ಕಿಡಿಗೇಡಿಗಳ ವಿರುದ್ಧ ಕ್ರಮ ವಹಿಸಿ
- ಹಬ್ಬದ ಸಂದರ್ಭಗಳಲ್ಲಿ ಉಂಟಾಗುವ ಪಾರ್ಕಿಂಗ್ ಗೊಂದಲಗಳನ್ನು ನಿಯಂತ್ರಿಸಲು, ಪ್ರತ್ಯೇಕ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಮಾಡಿ
- ನೆಹರು ರಸ್ತೆಯಲ್ಲಿನ ಪಾರ್ಕಿಂಗ್ ಸಮಸ್ಯೆ ಬಗೆಹರಿಸಿ
- ನೆಹರು ರಸ್ತೆಯಲ್ಲಿನ ಅಪಾಯಕಾರಿಯಾದ ಗುಂಡಿಗಳನ್ನು ತ್ವರಿತವಾಗಿ ದುರಸ್ತಿ ಮಾಡಿ
- ಡಿವೈಡರ್’ಗಳ ಮೇಲೆ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಿ, ದಾರಿಗಳ ದೃಶ್ಯತೆ ಮತ್ತು ಸುರಕ್ಷತೆಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಿ
- ಅನಧಿಕೃತವಾಗಿ ಹಾಕಲಾಗಿರುವ ಫ್ಲೆಕ್ಸ್ ಬೋರ್ಡುಗಳು, ನಗರ ಸೌಂದರ್ಯವನ್ನು ಹಾನಿಗೊಳಿಸುತ್ತಿರುವುದರಿಂದ ಅವನ್ನು ತೆರವುಗೊಳಿಸಲು ತP್ಷÀಣದ ಕ್ರಮ ಕೈಗೊಳ್ಳಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post