ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ದೀಪಾವಳಿ #Deepawali ಲಕ್ಷ್ಮೀ ಪೂಜೆ #Lakshmi Pooja ನೆರವೇರಿಸಿದ್ದಾರೆ.
ತನ್ನು ಅರಸಾಳು ಎಂಬ ಯುವಕ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ (ತನ್ವಿ ಮೊಬೈಲ್ ವರ್ಲ್ಡ್) ಅಂಗಡಿಯಲ್ಲಿ ಪ್ರತಿ ವರ್ಷ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಾದ ಕೋಡೂರು ಪ್ರಮೋದ ಜೋಯಿಸ್ ಅವರಿಂದ ಪೂಜೆ ನೆರವೇರಿಸಿದ್ದಾರೆ.
Also read: ಚನ್ನಪಟ್ಟಣ | ಗೀತಾ ಶಿವರಾಂ ಕಾಂಗ್ರೆಸ್ ತೊರೆದು ಎನ್‌ಡಿಎ ಸೇರ್ಪಡೆ
ಹಬ್ಬಗಳು ಸಂಬಂಧಗಳನ್ನು ಗಟ್ಟಿಗೊಳಸಿಬೇಕು. ಜಾತಿ- ಧರ್ಮ ನೆಪ ಮಾತ್ರ. ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಹಬ್ಬಗಳನ್ನು ಆಚರಿಸೋಣ. ಸೌಹಾರ್ಧತೆ ಸಾರೋಣ
ತನ್ನು ಅರಸಾಳು, ರಿಪ್ಪನ್ ಪೇಟೆ, ಮಾಲೀಕರು.
ನಾಡಿನೆಲ್ಲೆಡೆ ಲಕ್ಷ್ಮಿ ಪೂಜೆ ಹಾಗೂ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಸೌಹಾರ್ದತೆ ಕಾರಣಕ್ಕೆ ಹಿಂದೂಗಳ ಹಬ್ಬವನ್ನು ಮುಸ್ಲಿಂ ಬಾಂಧವರು ಹಾಗೂ ಮುಸ್ಲಿಂರ ಹಬ್ಬವನ್ನು ಹಿಂದೂ ಧರ್ಮದವರು ಆಚರಿಸುವುದನ್ನು ಅಲ್ಲಲ್ಲಿ ನೋಡಿದ್ದೇವೆ. ಅದೇ ಮಾದರಿಯ ಸುದ್ದಿ ಇಲ್ಲಿ ವರದಿಯಾಗಿದೆ. ತನ್ನು ಅವರು ಸತತ 5 ವರ್ಷದಿಂದ ಇದೇ ಮಾದರಿಯಲ್ಲಿ ಲಕ್ಷ್ಮೀ ಪೂಜೆಯನ್ನು ನಡೆಸಿಕೊಂಡು ಬಂದಿದ್ದಾರೆ. ಅದೇ ರೀತಿ ಇಲ್ಲಿ ಮುಸ್ಲಿಂ ಸಂಪ್ರದಾಯದಾಯಂತೆ ಕೂಡ ಧರ್ಮಗುರುಗಳಿಂದ ಪೂಜೆ ನೆರವೇರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post