ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2022 ಮುಕ್ತಾಯಗೊಂಡು 2023ರ ಹೊಸ ವರ್ಷವನ್ನು ಎದುರುಗೊಳ್ಳಲು ನಗರದ ಪ್ರತಿಷ್ಠಿತ ಕಾಸ್ಮೋಕ್ಲಬ್ ಸಿದ್ದವಾಗಿದ್ದು, ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಾಗರ ರಸ್ತೆಯಲ್ಲಿರುವ ಕಾಸ್ಮೋ ಕ್ಲಬ್’ನಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಸ್ವಾಗತಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಕ್ಷಣಗಣನೆ ಆರಂಭವಾಗಿದೆ.
ಇಂದು ಸಂಜೆ 7.30ರಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಬೆಂಗಳೂರಿನ ಖ್ಯಾತ ಆರ್’ಜೆ ಅಂಕಿತಾ, ಡಿಜೆ ಶಿವು ಮತ್ತು ಕೆಡಿಸಿ ಗ್ರೂಪ್’ನಿಂದ ನೃತ್ಯ, ಫ್ಯಾಶನ್ ಶೋ, ಡಿಜೆ, ಲೈವ್ ಮ್ಯೂಸಿಕ್, ಸ್ಪೋರ್ಟ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ.
ಒಂದು ಸಾವಿರ ಮಂದಿ ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆಯಿದ್ದು, ವೆಜ್ ಮತ್ತು ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post