ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೇಲಿನ ಹನಸವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಡಿ. ವತ್ಸಲ ಹಾಗೂ ಪತ್ರಕರ್ತ ವೈ.ಕೆ. ಸೂರ್ಯ ನಾರಾಯಣ ದಂಪತಿಯ ಪುತ್ರ ವೈ.ಎಸ್. ಅನಿಕೇತನ್ ಅವರು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್)ಯಲ್ಲಿ #CLET ಅಖಿಲ ಭಾರತ ಮಟ್ಟದಲ್ಲಿಯೇ 84ನೇ ಶ್ರೇಯಾಂಕದಲ್ಲಿ ತೇರ್ಗಡೆಯಾಗುವ ಮೂಲಕ ಅತ್ತುತ್ತಮ ಸಾಧನೆ ಮಾಡಿದ್ದಾರೆ.
ಅನಿಕೇತನ್ ಅವರದ್ದು ಕರ್ನಾಟಕಕ್ಕೆ 7ನೇ ರಾಂಕ್ ಆಗಿದ್ದು, ಭಾರತದಲ್ಲಿಯೇ ಅತ್ತುತ್ತಮ ಕಾನೂನು ವಿಶ್ವ ವಿದ್ಯಾಲಯ ಎಂದು ಹೆಸರು ಪಡೆದಿರುವ ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿಗೆ ಅವರು ಸುಲಭವಾಗಿ ಪ್ರವೇಶ ಪಡೆಯಲು ಇದು ಅನುಕೂಲ ಕಲ್ಪಿಸಿದೆ. ಕಾನೂನು ಪ್ರವೇಶಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್)ಗೆ ಸರಿ ಸುಮಾರು 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು.
Also read: ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿಗೆ ವಿಚಾರ | ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು?

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್)ಯಲ್ಲಿ ಅನಿಕೇತನ್ ಮಾಡಿರುವ ಈ ಸಾಧನೆ ಮಲೆನಾಡು ಮಾತ್ರವಲ್ಲದೆ ಮಧ್ಯ ಕರ್ನಾಟಕದಲ್ಲಿಯೇ ಇದು ಪ್ರಥಮ ಎಂದೇ ಹೇಳಲಾಗುತ್ತಿದೆ. ಕಾನೂನು ಪದವಿ ಓದಲು ಬಯಸಿದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಈ ಭಾಗದಿಂದ ಕ್ಲಾಟ್ ಪರೀಕ್ಷೆ ತೆಗೆದುಕೊಂಡಿದ್ದರೂ, ಇಷ್ಟು ಅಂಕಗಳೊಅದಿಗೆ ಇಂತಹ ಸಾಧನೆ ಮಾಡಿರಲಿಲ್ಲ. ಆದರೆ ಅನಿಕೇತನ್ ತನ್ನ ಓದು ಮತ್ತು ಶ್ರದ್ಧೆಯೊಂದಿಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶಿವಮೊಗ್ಗದ ಅನೇಕ ಮಂದಿ ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post