ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಯಿತನಕ್ಕೆ ಅಪಕ್ವವಾದ ಆನೆಯೊಂದು ಗಂಡು ಮರಿಯೊಂದಕ್ಕೆ ಜನ್ಮ ನೀಡಿದ್ದು, ಜನ್ಮ ನೀಡಿದ ನಾಲ್ಕು ದಿನಗಳಲ್ಲಿ ತಾಯಿಯ ಹಾಲು ಸಿಗದೆ ಮರಿ ಸಾವನ್ನಪ್ಪಿರುವ ಘಟನೆ ಶೆಟ್ಟಿಹಳ್ಳಿಯ ಕಾಡಿನಲ್ಲಿ ನಡೆದಿದೆ.
ತಾಯಿತನ ತೋರುವಷ್ಟು ಪ್ರೌಢವಾಗದ ಸಕ್ರಬೈಲಿನ ಹೇಮಾವತಿ ಎಂಬ 11 ವರ್ಷದ ಆನೆ ಕಾಡಿನಲ್ಲಿ ಶುಕ್ರವಾರ ಮರಿಹಾಕಿತ್ತು. ಮರಿಹಾಕಿದಾಗಿನಿಂದ ತಾಯಿ ಆನೆ ಹಾಲುಣಿಸದೆ ಇದ್ದು, ಕಾವಾಡಿಗಳು ಮರಿಯನ್ನು ಬಜಾವ್ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಹೇಮಾವತಿ ಮರಿಯನ್ನು ಬಿಟ್ಟುಹೋದಾಗ ಈ ಕಾವಾಡಿಗಳು ಹಾಲುಣಿಸುವ ಕೆಲಸ ಮಾಡಿದ್ದಾರೆ. ಆದರೂ ಮರಿ ಹಾಲು ಕುಡಿಯದ ಕಾರಣ ನಿನ್ನೆ ಸಂಜೆ ಸಾವನ್ನಪ್ಪಿದೆ.
Also read: ಐಪಿಎಲ್ ಪಂದ್ಯ | ಈ ಜಾಹೀರಾತುಗಳ ಪ್ರದರ್ಶನಕ್ಕೆ ಕೇಂದ್ರ ಆರೋಗ್ಯ ಇಲಾಖೆ ಕಡಿವಾಣ
ಆನೆಗಳು 14½ ವರ್ಷದ ನಂತರ ಪರಿಪಕ್ವವಾಗಿ ಮರಿಗಳಿಗೆ ಜನ್ಮ ನೀಡುವುದಕ್ಕೆ. ಮರಿ ಹಾಕಿದ ನಂತರ ತಾಯಿತನ ಮೆರೆಯೋದಕ್ಕೆ ಸಾಧ್ಯವಾಗುತ್ತದೆ. ಆದರೆ ಹೇಮಾವತಿ 11 ವರ್ಷಕ್ಕೆ ಮರಿ ಹಾಕಿದ ಕಾರಣ ಎದೆಹಾಲು ಉಣಿಸಲು ಸಾಧ್ಯವಾಗಿಲ್ಲ ಹಾಗೂ ಹಾಲು ಉತ್ಪತ್ತಿಯೂ ಕಡಿಮೆ ಇತ್ತು ಎನ್ನಲಾಗಿದೆ.
ಹೇಮಾವತಿ ಇನ್ನೂ ಪ್ರೌಢಾಗದ ಆದ ಕಾರಣ ನೇತ್ರಾವತಿಯ ಜೊತೆಗೆ ಇರುತ್ತಿತ್ತು. ಸಕ್ರೆಬೈಲ್ ನಿಂದ ಕಾಡಿಗೆ ಬಿಟ್ಟಾಗ ಹೇಮಾವತಿ ಮತ್ತು ನೇತ್ರಾವತಿಯ ಜೊತೆಗೆ ಕಾಡಾನೆಯೊಂದು ಸೇರಿಕೊಂಡಿತ್ತು. ಇದರಿಂದಾಗಿ ಹೇಮಾವತಿ ಗರ್ಭಾವತಿಯಾಗಿ ಶುಕ್ರವಾರ ಮರಿಹಾಕಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post