ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸುಂಕ ಕಡಿತ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ #Donald Trump ಹೇಳಿಕೆಗೆ ಭಾರತ ತಿರುಗೇಟು ನೀಡಿದ್ದು, ಸುಂಕ ಕಡಿತಕ್ಕೆ #Tariff reduction ಸಂಬಂಧಪಟ್ಟಂತೆ ಮಾತು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾತನಾಡಿರುವ ಭಾರತದ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ತ್ವಾಲ್, “ಭಾರತ ಮತ್ತು ಅಮೆರಿಕಗಳು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದತ್ತ ಕೆಲಸ ಮಾಡುತ್ತಿವೆ, ಕೇವಲ ತಕ್ಷಣದ ಸುಂಕ ಹೊಂದಾಣಿಕೆಗಳನ್ನು ಪಡೆಯುವ ಬದಲು ದೀರ್ಘಾವಧಿಯ ವ್ಯಾಪಾರ ಸಹಕಾರದ ಮೇಲೆ ಸರ್ಕಾರ ಗಮನ ಕೇಂದ್ರೀಕರಿಸುತ್ತಿವೆ” ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸರ್ಕಾರ ಅಮೆರಿಕದ ವಸ್ತುಗಳ ಮೇಲಿನ “ತಮ್ಮ ಸುಂಕ ಕಡಿತಗೊಳಿಸಲು” ಒಪ್ಪಿಕೊಂಡಿದೆ ಎಂದು ಘೋಷಿಸಿದ ಕೆಲವು ದಿನಗಳ ಅಂತರದಲ್ಲೇ ಭಾರತ ಸರ್ಕಾರದಿಂದ ಈ ರೀತಿಯ ಪ್ರತಿಕ್ರಿಯೆ ನೀಡಿದೆ.
Also read: ಶಿವಮೊಗ್ಗ | ಶೆಟ್ಟಿಹಳ್ಳಿ ಕಾಡಿನಲ್ಲಿ ಮರಿ ಆನೆ ಸಾವು
ಅಮೆರಿಕ ಅಧ್ಯಕ್ಷರ ಈ ಹೇಳಿಕೆ ಸಂಸತ್ ಸದನದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ವಿಪಕ್ಷಗಳ ನಾಯಕರು ಸುಂಕ ಕಡಿತದ ವಿಚಾರವಾಗಿ ಭಾರತ ಅಮೆರಿಕ ಎದುರು ಮಂಡಿಯೂರಿದೆ ಎಂದು ಟೀಕಿಸಿದರೆ ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ಸುಂಕ ಕಡಿತ ವಿಚಾರವಾಗಿ ಅಮೆರಿಕಕ್ಕೆ ಯಾವುದೇ ಮಾತುಕೊಟ್ಟಿಲ್ಲ ಎಂದು ಹೇಳಿದೆ.
ಸುಂಕ ವಿಚಾರವಾಗಿ ಜಾಗತಿಕವಾಗಿ ಕದನಕ್ಕೇ ಇಳಿದಿರುವ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿರುವ ದೇಶಗಳ ವಿರುದ್ಧ ಹೆಚ್ಚಿನ ಸುಂಕದ ಎಚ್ಚರಿಕೆ ನೀಡಿದ್ದು, “ಅಮೆರಿಕದ ಅಧ್ಯಕ್ಷರು ಪದೇ ಪದೇ ಎತ್ತುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಸೆಪ್ಟೆಂಬರ್ ವರೆಗೆ ಸಮಯ ಕೇಳಿದೆ” ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post