ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೋಪಾಲಗೌಡ ಬಡಾವಣೆಯಲ್ಲಿರುವ ಮಹಾನಗರ ಪಾಲಿಕೆ ಹಾಗೂ ಖಾಸಗಿ ನಿವೇಶನಗಳ ಅತಿಕ್ರಮಣ ತೆರವುಗೊಳಿಸಲು ಒತ್ತಾಯಿಸಿ ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪಾಲಿಕೆ 17ನೇ ವಾರ್ಡ್‍ನ ಗೋಪಾಲಗೌಡ ಬಡಾವಣೆಯ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಪಾಲಿಕೆಗೆ ಸೇರಿದ ಖಾಲಿ ನಿವೇಶನಗಳಿವೆ. ಇದಕ್ಕೆ ಹೊಂದಿಕೊಂಡಂತೆ ಪಾಲಿಕೆ ಕಸ ವಿಲೇವಾರಿ ಘಟಕ ತೆರೆದಿದೆ. ಇಲ್ಲಿ ಉಳಿದ ಜಾಗಕ್ಕೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲ. ಇದನ್ನು ಗಮನಿಸಿದ ಕೆಲವು ಮಾಜಿ ಜನಪ್ರತಿನಿಧಿಗಳು, ಪ್ರಭಾವಿಗಳು, ಹಾಲಿ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಆಸ್ತಿ ಕಬಳಿಸಲು ಹೊರಟಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಈ ಸಂದರ್ಭದಲ್ಲಿ ಪ್ರಮುಖರಾದ ಜಿ.ಡಿ. ಮಂಜುನಾಥ್, ಟಿ.ಡಿ. ಗೀತೇಂದ್ರ ಗೌಡ, ಎ.ಪಿ. ಜಯ್ಯಣ್ಣ, ಆರ್. ರಾಜಶೇಖರ್, ಜಿ.ಎಸ್. ಶಿವಕುಮಾರ್, ಬಿ.ಆರ್. ರವಿ, ರುದ್ರಪ್ಪ, ಈ.ಟಿ. ಕಿರಣ್ ಕುಮಾರ್, ಎಂ.ಬಿ. ರವಿಕುಮಾರ್, ಬಸವರಾಜ್, ಮುರಳಿ, ಪ್ರಜ್ವಲ್, ಸುಧಾಕರ್ ಶೆಟ್ಟಿ, ಕೆ.ಪಿ. ಸುಬ್ಬಣ್ಣ, ಹೆಚ್.ಆರ್. ಮಹೇಂದ್ರ, ಸತೀಶ್ ಚಂದ್ರ, ಅಜಯ್, ಅರವಿಂದ್, ಶಿವಾನಂದ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post