ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುರ್ತು ಪರಿಸ್ಥಿತಿ #Emergency Period ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶವನ್ನು ರಕ್ಷಣೆ ಮಾಡಿತು ಎಂದು ಹಲವು ಸಾಹಿತಿಗಳೇ ಹೇಳಿದ್ದಾರೆ. ಅದು ಸತ್ಯ ಕೂಡ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ #Kalladka Prabhakar Bhat ಹೇಳಿದರು.
ನಗರದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವತಿಯಿಂದ ಬಂಟರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಪ್ರಧಾನಿಯಾಗಿ ನೆಹರು #Nehru ಆಯ್ಕೆ ತಪ್ಪು ನಿರ್ಧಾರ ಆಗಿತ್ತು. ಅವರಿಗೆ ಭಾರತದ ಧರ್ಮ, ಸಂಸ್ಕøತಿ ಗೊತ್ತಿರಲಿಲ್ಲ. ಚೀನೀ ಭಾಯಿ ಅಂತ ಚೀನಾಕ್ಕೆ 45 ಸಾವಿರ ಚ.ಕಿ. ಹಾಗೂ ಪಾಕ್‍ಗೆ ಆಕ್ರಮಿತ ಕಾಶ್ಮೀರ ಪ್ರದೇಶ ಬಿಟ್ಟುಕೊಟ್ಟಿದ್ದೇ ಅವರ ಸಾಧನೆ ಎಂದರು.
ನೆಹರು ಕುಟುಂಬದ ಗಾಂಧಿ ಶಬ್ದ ಬಳಕೆ ವಿಚಿತ್ರ:
ಇಂದಿರಾ ಗಾಂಧಿ #Indira Gandhi ಮದುವೆ ಆಗಿದ್ದು ಫಿರೋಜ್ ಖಾನ್ ಅವರನ್ನು. ಅವರು ಗಾಂಧಿ ಕುಟುಂಬಕ್ಕೆ ಸೇರಿದವರೂ ಅಲ್ಲ, ವಂಶಸ್ಥರೂ ಅಲ್ಲ. ಆದರೂ ಮುಗ್ಧ ಜನ ಗಾಂಧಿ ಕುಟುಂಬಕ್ಕೆ ಸೇರಿದವರು ಎಂದು ನಂಬಿದ್ದರು.
ಕೇವಲ ಒಂದು ರೈಲು ಅಪಘಾತಕ್ಕೆ ಆಗಿನ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು. ಆದರೆ ಹೈಕೋರ್ಟ್‍ನಲ್ಲಿ ಇಂದಿರಾ ಗಾಂಧಿ ವಿರುದ್ಧ ತೀರ್ಪು ಬಂದಿತ್ತು. ಇವರು ರಾಜೀನಾಮೆ ಬದಲು ಅಧಿಕಾರ ಉಳಿಸಿಕೊಳ್ಳಲು ಮುಂದಾದರು. ಆಗಿನ ಕಾನೂನು ಮಂತ್ರಿ ಎಸ್.ಎಸ್. ರೈ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಸಲಹೆ ನೀಡಿದರು. ಆಗಿನ ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಅದನ್ನು ಜಾರಿ ಮಾಡಿದರು. ಇಡೀ ದೇಶದಲ್ಲಿ 567 ಜನರನ್ನು ಮೂರ್ನಾಲ್ಕು ಗಂಟೆಯಲ್ಲಿ ಬಂಧಿಸಿದರು. ಇಂದಿರಾ ಗಾಂಧಿ ವಿರೋಧಿ ನಾಯಕರನ್ನು ಬಂಧಿಸಲಾಯಿತು ಎಂದರು.
ವೈಯಕ್ತಿಕ ಸ್ವಾತಂತ್ರ್ಯ ಹರಣ :
ಇಂದಿರಾಗಾಂಧಿ ವಿರುದ್ಧ ಮಾತನಾಡುವ ತಾಖತ್ತು ಯಾರಿಗೂ ಇರಲಿಲ್ಲ. ಪತ್ರಿಕೆ ಮುದ್ರಣ ಸ್ಥಗಿತ ಆಗಿದ್ದವು. ಭಾಷಣ ಮಾಡುವ ಹಾಗಿರಲಿಲ್ಲ. ವೈಯಕ್ತಿಕ ಸ್ವಾತಂತ್ರ್ಯ ಸಂಪೂರ್ಣ ಹರಣ ಮಾಡಲಾಗಿತ್ತು ಎಂದರು.
ಆಗ ಆರ್‍ಎಸ್‍ಎಸ್ ಪ್ರತಿಭಟನೆಯ ನಿರ್ಧಾರ ಮಾಡಿತು. ಜನರು ಇದನ್ನು ಹುಚ್ಚು ಎಂದರು. ಹೆಗಡೇವಾರ್ ಅವರು ಇದು ದೇಶದ ಹುಚ್ಚು ಅಂತ ಹೇಳಿದರು. ರಸ್ತೆಗೆ ಇಳಿದು ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದರು. ಆಗ ಮಂಗಳೂರಿನಲ್ಲಿ ಕಹಳೆ ಪತ್ರಿಕೆ ಗುಪ್ತವಾಗಿ ಆರಂಭವಾಯಿತು. ಪೊಲೀಸ್ ಠಾಣೆಗೆ ಪೇಪರ್ ಅಂಟಿಸಿದರು. ಪೇಪರ್ ಹಂಚುವಾಗ ಕೆಲವರ ಬಂಧನವೂ ಆಯಿತು. 263 ಪತ್ರಕರ್ತರ ಮೇಲೆ ಪ್ರಕರಣ ಮೀಸಾ ಕಾಯ್ದೆಯಡಿಯಲ್ಲಿ ದಾಖಲಾಗಿತ್ತು. ಆಗ ನಿಷ್ಠಾವಂತ ಕಾರ್ಯಕರ್ತರು ಇದ್ದರು ಎಂದರು.
ಪ್ರಜಾಪ್ರಭುತ್ವ ಐಸಿಯುನಲ್ಲಿತ್ತು
ಡಾ. ಶ್ರೀನಿವಾಸ ರೆಡ್ಡಿ ಪ್ರಸ್ತಾವಿಕ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ಥಂಭಗಳನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿ ಮೊಟಕು ಮಾಡಿದರು. ಸುಮಾರು 21 ತಿಂಗಳ ಕಾಲ ಪ್ರಜಾಪ್ರಭುತ್ವವನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಇಂದಿರಾ ಗಾಂಧಿ ಅಧಿಕಾರ ದಾಹಕ್ಕೆ ಸರ್ವಾಧಿಕಾರಿ ಆಗಿದ್ದರು ಎಂದರು.
ಪ್ರೊ. ರಾಚಪ್ಪ ಅಧಕ್ಷತೆ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ವೈ.ಎ. ನಾರಾಯಣ ಸ್ವಾಮಿ, ಗದಗ್ ಗ್ರಾಮೀಣ ಅಭಿವೃದ್ಧಿ ವಿವಿ ನಿವೃತ್ತ ಕುಲಪತಿ ಪ್ರೊ. ವಿಷ್ಣುಕಾಂತ್, ಬಿಜೆಪಿ ಎಸ್ಟಿ ಮೋರ್ಚಾ ಅಧಕ್ಷ ರಾಮು ನಾಯ್ಕ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post