ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಸಂಘಟನಾ ಮಹಾಮಂಡಳಿಯ 78ನೇ ವರ್ಷದ ಗಣೇಶೋತ್ಸವದ ಮಹಾಮಂಗಳಾರತಿ ಹಾಗೂ ಶಿವಮೂರ್ತಿ ಪುಣ್ಯಸ್ಮರಣೆಯು ಸೆ.೮ರ ಸಂಜೆ 7:30ಕ್ಕೆ ನಡೆಯಲಿದ್ದು, ಸೆ.9ರ ನಾಳೆ ಬೆಳಗ್ಗೆ ಬೆಳಗ್ಗೆ 9:30ಕ್ಕೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವವು ಪ್ರಾರಂಭವಾಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು, ಹಿಂದೂ ಧರ್ಮಾಭಿಮಾನಿಗಳು, ಎಲ್ಲಾ ಸಂಘಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶಾಂತ ರೀತಿಯಲ್ಲಿ ವಿಜೃಂಭಣೆಯಿಂದ ನೆರವೇರಿಸಲು ಹಿಂದೂ ಸಂಘಟನಾ ಮಹಾಮಂಡಳಿ ಮನವಿ ಮಾಡಿದೆ.
ಸಿಂಗಾರಗೊಂಡ ಶಿವಮೊಗ್ಗ:
ಹಿಂದೂ ಮಹಾಸಭಾ ರಾಜಬೀದಿ ಉತ್ಸವ ಹಿನ್ನೆಲೆ ನಗರದ ಹಲವೆಡೆ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದು, ಮೆರವಣಿಗೆ ಸಾಗುವ ಗಾಂಧಿಬಜಾರ್, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ.
Also read: ಸೊರಬ ಶಾಸಕರ ಆಪ್ತ ಸಹಾಯಕನಿಂದ ಅಕ್ರಮ ಭೂ ಕಬಳಿಕೆ: ದಸಂಸ ಆರೋಪ
ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಕೃಷ್ಣಾರ್ಜುನರ ಪ್ರತಿಮೆ ಸ್ಥಾಪಿಸಲಾಗಿದ್ದು, ಧರ್ಮಸಂಸ್ಥಾಪನಾರ್ಥಾಯಾ ಸಂಭವಾಮಿ ಯುಗೇ ಯುಗೇ ಅಡಿ ಬರಹ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post