ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಸೀಮೆಯ ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ 90.8 ಎಫ್ ಎಮ್ #Shivamogga 90.8FM ಈಗ ಸಾರ್ವಜನಿಕರಿಗೆ ಆರ್ ಜೆ ಹಂಟ್ ನಡೆಸುತ್ತಿದೆ. ಇದರಲ್ಲಿ ಶಿವಮೊಗ್ಗದ ಆಸಕ್ತರಿಗೆ ಭಾಗವಹಿಸಲು ಅವಕಾಶವಿರುತ್ತದೆ.
ಆ.15ರಂದು ಆಡಿಷನ್ ಇರುತ್ತದೆ. ಇದರಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಗೂಗಲ್ ಅಪ್ಲಿಕೇಷನ್ ಭರ್ತಿ ಮಾಡಬೇಕು. ನೋಂದಣಿ ಶುಲ್ಕ 50 ರೂ. ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಒಂದು ಫೋಟೋ ಹಾಗೂ ಪೆನ್ ತರಬೇಕು. ಧ್ವನಿ, ಭಾಷಾ ಸ್ಪಷ್ಟತೆ, ಆತ್ಮ ವಿಶ್ವಾಸ, ನಿರೂಪಣೆ, ಸೋಷಿಯಲ್ ಮೀಡಿಯಾ ಆಸಕ್ತಿಗಳು, ಸಾಮಾನ್ಯ ಜ್ಞಾನ, ಸ್ಥಳೀಯ ಜ್ಞಾನ, ಬಾಡಿ ಲಾಂಗ್ವೇಜ್ ಇತ್ಯಾದಿಗಳನ್ನು ಗಮನಿಸಲಾಗುತ್ತದೆ. ಆ.13 ನೋಂದಣಿಗೆ ಕಡೆಯ ದಿನವಾಗಿದೆ.
ಭಾಗವಹಿಸುವವರು ತಮ್ಮ ಇಷ್ಟದ ಯಾವುದೇ ವಿಷಯದ ಬಗ್ಗೆ 2-3 ನಿಮಿಷದ್ಟು ಮಾತನಾಡಲು ಸಿದ್ದರಾಗಿ ಬರಬೇಕು. ವಿಷಯದ ಆಯ್ಕೆಯಲ್ಲಿ ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನ, ಕ್ರೈಮ್, ಸೆಕ್ಸ್ ಯಾವುದೇ ಧರ್ಮ, ಜಾತಿ, ಸಮುದಾಯಗಳು, ಲಿಂಗದ ನಿಂದನೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಸಿದ್ದವಾಗಿ ಬಂದ ವಿಷಯದ ಬಗ್ಗೆ ಮಾತನಾಡುವುದು, ನಾವು ನೀಡುವ ವಿಚಾರದ ಬಗ್ಗೆ ಆಶು ಮಾತು ( ಸ್ಪಾಂಟೇನಿಯಸ್ ಟಾಕ್) ಇರುತ್ತದೆ.
ಇದರಲ್ಲಿ ಆಯ್ಕೆಯಾದವರಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ ಆರ್ ಜೆ ಕಾರ್ಯ ನಿರ್ವಹಣೆ, ವಿಷಯ ಸಂಗ್ರಹ, ಬೇಸಿಕ್ ವಾಯ್ಸ್ ಎಡಿಟಿಂಗ್ ಇತ್ಯಾದಿಗಳನ್ನು ಕಲಿಸಿಕೊಡಲಾಗುತ್ತದೆ. ಈ ತರಬೇತಿಯಲ್ಲಿದ್ದವರಿಗೆ ಪ್ರಮಾಣ ಪತ್ರ ದೊರೆಯಲಿದೆ. ಇದರಲ್ಲಿ ಉತ್ತಮ ಪ್ರತಿಭೆಯನ್ನು ತೋರಿಸಿದವರನ್ನು ಆಯ್ಕೆ ಮಾಡಿಕೊಂಡು ಬಾನುಲಿಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಈ ಒಟ್ಟೂ ಪ್ರಕ್ರಿಯೆ ಒಂದು ವಿಶೇಷ, ವಿಭಿನ್ನ ಅವಕಾಶವಾಗಿರುತ್ತದೆ. ಗೂಗಲ್ ಅಪ್ಲಿಕೇಷನ್ ಹಾಗೂ ಹೆಚ್ಚಿನ ಮಾಹಿತಿಗೆ ನಿಲಯ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ (ಮೊ: 72591 76279) ಇದಕ್ಕೆ ಸಂಪರ್ಕಿಸಬಹುದು.
ಈ ಆಡಿಷನ್ ಆಯೋಜನೆಯಲ್ಲಿ ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರವು ಸಹಭಾಗಿಗಳಾಗಿವೆ. ರೇಡಿಯೋ ಶಿವಮೊಗ್ಗ ಆಪ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಂಡು ದಿನದ 24 ಗಂಟೆಯೂ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳನ್ನು ಆಲಿಸಬಹುದೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post