ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಸೀಮೆಯ ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ 90.8 ಎಫ್ ಎಮ್ #Shivamogga 90.8 FM ಈಗ ದ್ವಿತೀಯ ಹಂತದ ಆರ್ ಜೆ ಹಂಟ್ ನಡೆಸುತ್ತಿದೆ. ಇದರಲ್ಲಿ ಪದವಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಭಾಗವಹಿಸಲು ಅವಕಾಶವಿರುತ್ತದೆ.
ಜುಲೈ 20ರಂದು ಮಧ್ಯಾಹ್ನ 1:30ಕ್ಕೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಆಡಿಷನ್ ಇರುತ್ತದೆ. ಇದರಲ್ಲಿ ಭಾಗವಹಿಸುವವರು ಗೂಗಲ್ ಅಪ್ಲಿಕೇಷನ್ ಭರ್ತಿ ಮಾಡಬೇಕು. ಸ್ಥಳದಲ್ಲೇ 20 ರೂ. ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಕಾಲೇಜು ಐಡಿ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಅಳತೆಯ ಒಂದು ಫೋಟೋ ಪೆನ್ ಅಗತ್ಯ. ಧ್ವನಿ, ಭಾಷಾ ಸ್ಪಷ್ಟತೆ, ಆತ್ಮ ವಿಶ್ವಾಸ, ನಿರೂಪಣೆ, ಸೋಷಿಯಲ್ ಮೀಡಿಯಾ ಆಸಕ್ತಿಗಳು, ಸಾಮಾನ್ಯ ಜ್ಞಾನ, ಸ್ಥಳೀಯ ಜ್ಞಾನ, ಬಾಡಿ ಲಾಂಗ್ವೇಜ್ ಇತ್ಯಾದಿಗಳನ್ನು ಗಮನಿಸಲಾಗುತ್ತದೆ.

Also read: ಬೆಂಗಳೂರು | ಜುಲೈ 17ರ ನಾಳೆ ಮಂತ್ರಾಲಯ ಶ್ರೀಗಳಿಂದ ತಪ್ತ ಮುದ್ರಾಧಾರಣೆ
ಇದರಲ್ಲಿ ಆಯ್ಕೆಯಾದವರಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ ಆರ್ ಜೆ ಕಾರ್ಯ ನಿರ್ವಹಣೆ, ವಿಷಯ ಸಂಗ್ರಹ, ವಾಯ್ಸ್ ಎಡಿಟಿಂಗ್ ಬೇಸಿಕ್ ಇತ್ಯಾದಿಗಳನ್ನು ಕಲಿಸಿಕೊಡಲಾಗುತ್ತದೆ. ಈ ತರಬೇತಿಯಲ್ಲಿದ್ದವರಿಗೆ ಪ್ರಮಾಣ ಪತ್ರ ದೊರೆಯಲಿದೆ. ಇದರಲ್ಲಿ ಉತ್ತಮ ಪ್ರತಿಭೆಯನ್ನು ತೋರಿಸಿದರನ್ನು ಆಯ್ಕೆ ಮಾಡಿಕೊಂಡು ಯೂತ್ ಆರ್ ಜೆಯಾಗಿ ಬಾನುಲಿಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಈ ಒಟ್ಟು ಪ್ರಕ್ರಿಯೆ ಒಂದು ವಿಶೇಷ, ವಿಭಿನ್ನ ಅವಕಾಶವಾಗಿರುತ್ತದೆ. ಗೂಗಲ್ ಅಪ್ಲಿಕೇಷನ್ ಹಾಗೂ ಹೆಚ್ಚಿನ ಮಾಹಿತಿಗೆ ನಿಲಯ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ (ಮೊ: 72591 76279) ಇದಕ್ಕೆ ಸಂಪರ್ಕಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post