ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್-2 ಯೋಗೀಶ್ ಎನ್ನುವವರು ಲೋಕಾಯುಕ್ತ ಬಲೆಗೆ #Lokayuktha raid ಬಿದ್ದಿದ್ದಾನೆ.
ಪ್ರಕರಣದ ಹಿನ್ನೆಲೆ ಏನು?
ಬಿ.ಯಶವಂತ ಎಂಬುವರು ಶಿವಮೊಗ್ಗದ ಚನ್ನಮುಂಭಾಪುರ ಖಾಸಗಿ ಕಾಲೇಜು ಎದುರು10.08 ಗುಂಟೆ ಜಾಗ ಹೊಂದಿದ್ದಾರೆ. ಈ ಜಾಗವನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಶಿವಮೊಗ್ಗ ತಾಲೂಕು ಅಬ್ಬಲಗೆರೆ ಗ್ರಾಮ ಪಂಚಾಯ್ತಿಯ ಅಧಿಕಾರಿಯಾದ ಕಾರ್ಯದರ್ಶಿ-2 ಯೋಗೇಶ್ ಅವರ ಬಳಿ ಈಗ್ಗೆ 6 ತಿಂಗಳ ಹಿಂದೆ ಆಧಾರ ಕಾರ್ಡ್, ಸ್ಟೇಚ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಏಕ ನಿವೇಶನ ವಿನ್ಯಾಸ ನಕ್ಷೆ ದೃಢೀಕರಣ, ಡಿಸಿ ಅವರ ಅಲಿನೇಷನ್ ಪತ್ರವನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಿದ್ದರು.
ಅರ್ಜಿಯನ್ನು ಪಡೆದುಕೊಂಡು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಯೋಗೀಶ್ ಕೆಲಸ ಮಾಡಿಕೊಡದೆ ಸತಾಯಿಸಿದ್ದರು. ನಿನ್ನೆ ಮಧ್ಯಾಹ್ನ ಸುಮಾರು 12.45 ಗಂಟೆಗೆ ಯಶವಂತ್ ಅಬ್ಬಲಗೆರೆ ಪಂಚಾಯಿತಿ ಕಛೇರಿಗೆ ಹೋದಾಗ ನಿಮ್ಮ ಜಾಗವು ಅಪ್ರೋವಲ್ ಆಗಿದೆ ಕೆಲಸಕ್ಕೆ ರೂ.15,000 ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಯೋಗೇಶ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿತ್ತು. ದೂರಿನ ಆಧಾರದಲ್ಲಿ ದಾಳಿ ನಡೆಸಲಾಗಿದ್ದು, ಲಂಚ ಪಡೆಯುವಾಗ ಯೋಗೇಶ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.
Also read: ಜನರಿಗೆ ಬೇಕಿರುವುದು ಭದ್ರತೆ | ವೈಯಕ್ತಿಕ ಟೀಕೆಗೆ ಮತದಾರರು ತಲೆ ಕೆಡಿಸಿಕೊಳ್ಳಲ್ಲ | ಬಿ.ವೈ. ರಾಘವೇಂದ್ರ
ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್’ಪಿ ಮಂಜುನಾಥ್ ಚೌದರಿ, ಉಪಾಧೀಕ್ಷಕ ಉಮೇಶ್ ಈಶ್ವರನಾಯ್ಕ್ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕರಾದ ವೀರಬಸಪ್ಪ ಎಲ್. ಕುಸಲಾಪುರ, ಪ್ರಕಾಶ್, ಎಚ್.ಎಸ್. ಸುರೇಶ್ ಮತ್ತು ಸಿಬ್ಬಂದಿಗಳಾದ ಯೋಗೇಶ್, ಸುರೇಂದ್ರ, ಪ್ರಶಾಂತ್ ಕುಮಾರ್, ರಘುನಾಯ್ಕ್, ದೇವರಾಜ್, ಪುಟ್ಟಮ್ಮ ಎನ್, ಪ್ರದೀಪ್, ಗೋಪಿ ವಿ., ಜಯಂತ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post