ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚುನಾವಣೆ ಸಮಯದಲ್ಲಿ ಕೌಟುಂಬಿಕವಾಗಿ ಹಾಗೂ ವೈಯಕ್ತಿಕ ಟೀಕೆಗಳು ಸಹಜವಾಗಿದ್ದು, ಇವೆಲ್ಲಾ ಜನರಿಗೆ ಮುಖ್ಯವಲ್ಲ. ಬದಲಾಗಿ ಜನರು ತಮ್ಮ ಭದ್ರತೆಯನ್ನು ಯಾರು ನೀಡುತ್ತಾರೆ ಎಂಬುದನ್ನು ಚಿಂತಿಸುತ್ತಾರೆ ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ #B Y Raghavendra ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಚುನಾವಣೆಯ ಸಮಯದಲ್ಲಿ ಟೀಕೆಗಳು ಸಹಜ. ಕೆಲವರು ವೈಯಕ್ತಿಕವಾಗಿ ಹಾಗೂ ಕೆಲವರು ಕುಟುಂಬದ ವಿಚಾರಗಳನ್ನು ಉಲ್ಲೇಖಿಸಿ ಟೀಕಿಸುವುದು ಸಹಜವಾಗಿರುತ್ತದೆ ಎಂದರು.
ಚುನಾವಣಾ ಸಮಯದಲ್ಲಿನ ಯಾವುದೇ ಟೀಕೆಗಳಿಗೆ ಜನರು ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಮುಖವಾಗಿ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದ ವಿಚಾರದಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಹೀಗಾಗಿ, ಚುನಾವಣೆಯ ವಿಚಾರದಲ್ಲಿ ಜನರಿಗೆ ಬೇಕಿರುವುದು ತಮ್ಮ ಮಕ್ಕಳ ಭದ್ರತೆ. ಹೀಗಾಗಿ, ಇದನ್ನು ನೀಡುತ್ತಿರುವ ಮೋದಿ ಸರ್ಕಾರವನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
Also read: ಯಕ್ಷಲೋಕದ ದಿಗ್ಗಜ, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
ನಗರ ಶಾಸಕ ಚನ್ನಬಸಪ್ಪ ಅವರ ನೇತೃತ್ವದಲ್ಲಿ ಬೊಮ್ಮನಕಟ್ಟೆ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ಕಾರ್ಯ ನಡೆದಿದೆ. ಮಧ್ಯಮ ಹಾಗೂ ಬಡ ವರ್ಗದ ದುಡಿದು ಜೀವಿಸುವ ಜನರಿಗೆ ಗ್ಯಾರೆಂಟಿ ಹೆಸರಿನಲ್ಲಿ ಮೋಸ ಮಾಡಲಾಗಿದೆ. ಹೀಗಾಗಿ, ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದು, ಜನತೆ ಆಕ್ರೋಶಗೊಂಡಿದ್ದಾರೆ. ಈ ವಿಚಾರದ ಜೊತೆಯಲ್ಲಿ ಜನರಿಗಾಗಿ ಮೋದಿಯವರು #Modi ತಮ್ಮ ಸರ್ಕಾರದ ಅವಧಿಯಲ್ಲಿ ಬಡವರಿಗಾಗಿ ಜಾರಿಗೊಳಿಸಿರುವ ಜನಪರ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post