ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಿಎಸ್‍ಎಸ್‍ಎಂ ಪಿರಮಿಡ್ ವಲ್ರ್ಡ್ ಫೌಂಡೇಷನ್ ಬೆಂಗಳೂರು, ಪ್ರೇರಣಾ ಎಜುಕೇಷನಲ್ ಅಂಡ್ ಸೋಶಿಯಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವಧ್ಯಾನ ದಿನದ ಅಂಗವಾಗಿ ಶಿವಮೊಗ್ಗ ನಾದಧ್ಯಾನ ಚಕ್ರ-7ನನ್ನು ಡಿ.21ರಂದು ಮುಂಜಾನೆ ಸಾಗರ ರಸ್ತೆಯ ಪಿಇಎಸ್ ಕ್ಯಾಂಪಸ್‍ನ ಪ್ರೇರಣಾ ಕನ್ವೆನ್ಷನ್ ಹಾಲ್‍ನಲ್ಲಿ ಆಯೋಜಿಸಲಾಗಿದೆ ಎಂದು ಮ್ಯಾನೇಜಿಂಗ್ ಟ್ರಸ್ಟಿ ಡಾ.ಅಯ್ಯಪ್ಪ ಪಿಂಡಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.21ನ್ನು `ವಿಶ್ವಧ್ಯಾನ ದಿನ’ವನ್ನಾಗಿ #World Meditation Day ಆಚರಿಸುತ್ತಿದ್ದೇವೆ. ಧ್ಯಾನದಿಂದ ಮಾನಸಿಕ ಆರೋಗ್ಯ ಒತ್ತಡ ಕಡಿಮೆಯಾಗುತ್ತದೆ. ಜಾಗತಿಕ ಶಾಂತತೆ ಮತ್ತು ಏಕತೆಯ ಕ್ಷಣಕ್ಕಾಗಿ ಧ್ಯಾನ್ ಹೆಚ್ಚು ಶಾಂತಿಯನ್ನು ನೀಡುತ್ತದೆ. ಉತ್ತಮ ಆರೋಗ್ಯಕ್ಕೆ ಯೋಗಾಸನ ಎಷ್ಟು ಮುಖ್ಯವೋ ಅಷ್ಟೇ ಧ್ಯಾನಕೂಡ ಮುಖ್ಯ. ಇದರಿಂದ ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಎಂದರು.
ಶಿವಮೊಗ್ಗದಲ್ಲಿ ಡಿ.21ರಂದು ನಡೆಯುವ ಸಾಮೂಹಿಕ ಧ್ಯಾನ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸುಮಾರು 5000ಕ್ಕೂ ಹೆಚ್ಚು ಧ್ಯಾನಿಗಳು ಒಟ್ಟಾಗಿ ಸೇರುತ್ತಾರೆ. ಜಿಲ್ಲೆಯ ಎಲ್ಲಾ ಕುಟುಂಬವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಧ್ಯಾನ ಮಾಡುವುದಕ್ಕೆ ಯಾವುದೇ ವಯಸ್ಸಿನ ಅಂತರ ಇರುವುದಿಲ್ಲ. ಬೆಳಿಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಕಾರ್ಯಕ್ರಮ ಇರುತ್ತದೆ. ಬೆಳಿಗ್ಗೆ ಸಾತ್ವಿಕ ಉಪಹಾರ ಇರುತ್ತದೆ. 8.30ಕ್ಕೆ ಉದ್ಘಾಟನಾ ಕಾರ್ಯಕ್ರಮವಿದ್ದು ಸಂಸದ ಬಿ.ವೈ. ರಾಘವೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸುವರು. ನಂತರ ನಾದಧ್ಯಾನ ಯಜ್ಞ ಇರುತ್ತದೆ. ಅಂತರರಾಷ್ಟ್ರೀಯ ಧ್ಯಾನ ತರಬೇತಿದಾರರಾದ ಡಾ.ಅಯ್ಯಪ್ಪ ಪಿಂಡಿ ಸುವರ್ಣ ಭಾಷಣ ಮಾಡಲಿದ್ದಾರೆ. ಹಿರಿಯ ಪಿರಮಿಡ್ ಮಾಸ್ಟರ್ಸ್‍ಗೆ ಸನ್ಮಾನ ಕಾರ್ಯಕ್ರಮವಿದ್ದು 1 ರಿಂದ 2 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲಾ ಧ್ಯಾನಿಗಳಿಗೂ ಮಧ್ಯಾಹ್ನದ ಸಾತ್ವಿಕ ಊಟ ಇರುತ್ತದೆ.
ಉದ್ಯಮಿ ಡಿ.ಎಸ್. ಚಂದ್ರಶೇಖರ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಕಡೆಯಿಂದಲೇ ಧ್ಯಾನಿಗಳು ಬರುತ್ತಾರೆ. ಇವರು ಉಳಿದುಕೊಳ್ಳಲು ಅನುಕೂಲವಾಗುವಂತೆ ಡಿ.20ರಂದು ಸಂಜೆ ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ವ್ಯವಸ್ಥೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಮಾಡಿದ್ದಾರೆ. ಹಾಗೆಯೇ ವಿನೋಬನಗರದ ಸಂಜೀವಿನಿ ಹಾಲ್‍ನಲ್ಲಿಯೂ ಕೂಡ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಮಮತಾ ರುದ್ರೇಶ್ ಮಾತನಾಡಿ, ಧ್ಯಾನ ಅತ್ಯಂತ ಪ್ರಮುಖವಾಗಿದೆ ಧ್ಯಾನವೆಂದರೆ ಶ್ವಾಸದ ಮೇಲೆ ಗಮನ ಎಂದು ಅರ್ಥ. ಪ್ರತಿನಿತ್ಯ 10 ರಿಂದ 15 ನಿಮಿಷ ಧ್ಯಾನ ಆರಂಭ ಮಾಡಿದರೆ ಹೆಚ್ಚು ಹೆಚ್ಚು ಮಾಡುತ್ತಾ ಹೋಗಬಹುದು. ಇದೊಂದು ಆರೋಗ್ಯವಂತ ಅನುಭವವಾಗಿದೆ ಈ ಕಾರ್ಯಕ್ರಮಕ್ಕೆ ಭಾಗವಹಿಸುವವರು ಶುಭ ಮಂಗಳ ಕಲ್ಯಾಣ ಮಂದಿರದಿಂದ ಬೆಳಿಗ್ಗೆ 7 ರಿಂದ 8.30ರ ವರೆಗೆ ವ್ಯವಸ್ಥೆ ಉಚಿತವಾಗಿ ಮಾಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ. ವಿಜಯಕುಮಾರ್, ನಾಗೇಂದ್ರ, ಜಯಸುರೇಶ್, ಶೋಭಾ ಶಿರೂರ್‍ಕರ್, ಮಲ್ಲಿಕಾರ್ಜುನ, ಶ್ರೀಕಾಂತ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















