ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುವರ್ಣ ಸಾಂಸ್ಕೃತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುದ್ರಕರ ಹಬ್ಬ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ, ಪತ್ರಿಕೆ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರ ವನ್ಯಜೀವಿ ಮತ್ತು ಜನಜೀವನ ಕುರಿತಾದ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕರ ಪ್ರಶಂಸೆ ಜೊತೆಗೆ ಮೆಚ್ಚುಗೆಗೆ ಪಾತ್ರವಾಹಿತು.
ನಗರದ ಕ್ರಿಯಾಶೀಲ ಪತ್ರಿಕಾ ಮತ್ತು ವನ್ಯಜೀವಿ, ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರ ಕ್ಯಾಮರಾದಲ್ಲಿ ಸೆರೆಹಿಡಿದ ವನ್ಯಜೀವಿ, ಪಕ್ಷಿ ಸಂಕುಲದ ಜೀವನ ಕ್ರಮ, ತೋಳಲಾಟಾದ ವಿವಿಧ ಮಜಲುಗಳನ್ನು ಸೆರೆಹಿಡಿದಿದ್ದಾರೆ ಅಲ್ಲದೆ ಜನಜೀವನ ಛಾಯಾಚಿತ್ರದಲ್ಲಿ ಶ್ರಮಿಕ ವರ್ಗಗಳ ಜೀವನ ಕ್ರಮ ಮತ್ತು ತುತ್ತು ಅನ್ನಕ್ಕಾಗಿ ಪಡುವ ಶ್ರಮದ ಪರಿ ನೋಡುಗರನ್ನು ಮುಖವಿಸ್ಮಿತರಾಗಿ ಮಾಡಿತು. ದಿನನಿತ್ಯದ ಯಾಂತ್ರಿಕ ಜೀವನದ ಓಟದಲ್ಲಿ ನಮ್ಮ ಸುತ್ತ ನಡೆಯುವ ಸಮಾಜದ ಶ್ರಮಿಕ ವರ್ಗಗಳ ಜೀವನ ಸಾಹಸದ ಕುರಿತಾದ ಸೂಕ್ಷ್ಮ ವಿಚಾರವನ್ನು ಸಾವಿರ ಅಕ್ಷದಲ್ಲಿ ಏಳುವ ವಿಚಾರವನ್ನು ಒಂದು ಚಿತ್ರ ಹೇಳುವ ಹಾಗೇ ದಾಖಲಿಸಿರುವುದು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಶಿವಮೊಗ್ಗ ನಾಗರಾಜ್ ಅವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಸೇರಿದಂತೆ ಅನೇಕ ಪ್ರಶಸ್ತಿ ಪಡೆದು ವಿದೇಶದಲ್ಲೂ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅಲ್ಲದೇ ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಅಮೂಲ್ಯ ಛಾಯಾಚಿತ್ರ ಪ್ರದರ್ಶನ ಮಾಡುವ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಇವರ ಕಾರ್ಯ ಶ್ಲಾಘನೀಯ ಎಂದು ನೋಡುಗರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಛಾಯಾಚಿತ್ರ ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಸವಕೇಂದ್ರದ ಶ್ರೀ ಬಸವ ಮರುಳಾಸಿದ್ದ ಸ್ವಾಮೀಜಿ, ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಮೇಯರ್ ಸುನೀತಾ ಅಣ್ಣಪ್ಪ, ಪಾಲಿಕೆ ಸದಸ್ಯೆ ಸುರೇಖಾ ಮುರಳಿಧರ್, ಮಾಜಿ ನಗರಸಭಾಧ್ಯಕ್ಷ ಎಂ. ಶಂಕರ್, ಮಲೆನಾಡು ಮುದ್ರಾಕ ಸಂಘದ ಅಧ್ಯಕ್ಷ ಮಾಧವಚಾರ್, ಕಾರ್ಯದರ್ಶಿ ಗಣೇಶ್ ಬಿಳಿಗಿ ಮತ್ತು ಸಂಘದ ಪದಾಧಿಕಾರಿಗಳು ಮತ್ತು ಮುದ್ರಾಕ ಸಂಘದ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post