ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ.ಶಾಂತರಾಜು ಅವರು, ಬೆಂಗಳೂರಿನ ಪೂರ್ವ ಸಂಚಾರ ವಿಭಾಗದ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆಗೊಂಡಿದ್ದಾರೆ.
ಇವರ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎಂ. ಲಕ್ಷ್ಮೀ ಪ್ರಸಾದ್ ನೂತನ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಲಕ್ಷ್ಮೀ ಪ್ರಸಾದ್ ಬಿಟೆಕ್ ಪದವೀಧರರಾಗಿದ್ದಾರೆ. ಯುಪಿಎಸ್‌ಸಿ 151ನೆಯ ರ್‍ಯಾಂಕ್ ಪಡೆದಿದ್ದು, ಇವರು ವಿಜಯಪುರದಲ್ಲಿ ಎಸ್‌ಪಿಯಾಗಿ, ಕಾರ್ಕಳದ ನಕ್ಸಲ್ ನಿಗ್ರಹದಳದ ಎಸ್‌ಪಿ ಹಾಗೂ ಬೆಂಗಳೂರಿನ ಇಂಟರ್ನಲ್ ಸೆಕ್ಯೂರಿಟಿಯ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವೀಕಾಂತೇ ಗೌಡರ ಜಾಗಕ್ಕೆ 2019ರಲ್ಲಿ ವರ್ಗಾವಣೆಗೊಂಡಿದ್ದ ಇವರು, ಈಗ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post