ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಮಾಡಲಾಗದೇ ಶಿವಮೊಗ್ಗ ವಿಮಾನ ನಿಲ್ದಾಣದಿಂದ #Shivamogga Airport ಹೈದರಾಬಾದ್’ಗೆ ಹಿಂದಿರುಗಿರುವ ಘಟನೆ ಶನಿವಾರ ನಡೆದಿದೆ.
ಶನಿವಾರ ಮಧ್ಯಾಹ್ನ ತಿರುಪತಿಯಿಂದ ಶಿವಮೊಗ್ಗದ ಕಡೆಗೆ ಬಂದ ವಿಮಾನವನ್ನು ಲ್ಯಾಂಡ್ ಮಾಡುಲು ಸಾಧ್ಯವಾಗಲಿಲ್ಲ. ನಿಲ್ದಾಣ ಮೇಲೆಯೇ ಸುಮಾರು 2-3 ಸುತ್ತು ಹಾರಾಟ ನಡೆಸಿದರೂ ಲ್ಯಾಂಡ್ ಮಾಡಲು ಹವಾಮಾನ ವೈಪರೀತ್ಯ ಅಡ್ಡಿಯಾಯಿತು.
ಪ್ರತಿಕೂಲ ಹವಾಮಾನದ ಹೊಂದಾಣಿಕೆಯಾಗದೇ ರನ್ ವೇ ಕಾಣದ ಹಿನ್ನೆಲೆಯಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದೇ ಹೈದರಾಬಾದ್’ಗೆ ತೆರಳಿದೆ.
Also read: ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ರೆಮೆಲ್ ಚಂಡಮಾರುತ | 7 ಮಂದಿ ಬಲಿ | 1 ಲಕ್ಷ ಮಂದಿ ಸ್ಥಳಾಂತರ
ಆನಂತರ ಸುಮಾರು 1 ಗಂಟೆಯ ನಂತರ ಹೈದರಾಬಾದ್’ನಿಂದ ಹೊರಟು, ಸಂಜೆ 4.30ರ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post