ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದಲ್ಲಿ ಭಾರಿ ಸರಕು ಸಾಗಣೆ ಲಾರಿಗಳಿಗೆ ಹಾಗೂ ಬಸ್ ಗಳಿಗೆ ಟ್ರಕ್ ಟರ್ಮಿನಲ್ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಲಾರಿ ಮಾಲೀಕರ ಒಕ್ಕೂಟ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸುಮಾರು 500ಕ್ಕೂ ಹೆಚ್ಚು ಲಾರಿಗಳು 600ಕ್ಕೂ ಹೆಚ್ಚು ಬಸ್ ಗಳು ಬಂದು ಹೋಗುತ್ತಿವೆ. ಇವುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಎಲ್ಲಿ ಬೇಕೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಆದ ಕಾರಣ ಬಸ್ ಮತ್ತು ಲಾರಿಗಳಿಗೆ ನಗರದ ಮೂರು ಕಡೆಯಲ್ಲಾದರೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿದಾರರು ತಿಳಿಸಿದರು.
Also read: ಬಿ.ವೈ. ವಿಜಯೇಂದ್ರರ ಈ ತಂತ್ರಗಾರಿಕೆ ದೇಶದಲ್ಲೇ ಮೊದಲಿರಬಹುದು | ಆಯನೂರು ಮಂಜುನಾಥ್ ವ್ಯಂಗ್ಯ
ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ -ಹೊನ್ನಾಳಿ, ಹೊಳೆಹೊನ್ನೂರು -ಶಿವಮೊಗ್ಗ, ಶಿವಮೊಗ್ಗ -ಸಾಗರ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ಟರ್ಮಿನಲ್ ಸ್ಥಾಪಿಸಬೇಕು. ತ್ಯಾವರ ಚಟ್ನಹಳ್ಳಿ ಮತ್ತು ಗೋಂಧಿ ಚಟ್ನಹಳ್ಳಿ ಮಧ್ಯೆ ಸುಮಾರು 45 ಎಕರೆ ಪ್ರದೇಶವನ್ನು ಸೂಡಾದಿಂದ ಗುರುತಿಸಲಾಗಿದೆ. ಇಲ್ಲಾದರೂ ತಂಗುದಾಣ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಅಧ್ಯಕ್ಷ ಬಿ.ಎ. ತಲ್ಕೀನ್ ಅಹಮ್ಮದ್, ಕಾರ್ಯಾಧ್ಯಕ್ಷ ವೈ.ಹೆಚ್. ನಾಗರಾಜ್, ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಆರ್. ರಂಗಪ್ಪ, ನಗರ ಸಾರಿಗೆ ಗೌರವಾಧ್ಯಕ್ಷ ಆರ್. ರುದ್ರೇಶ್, ಭೋಜರಾಜ್, ಜಗನ್ನಾಥ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post