ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಬಡವ, ಕಾರ್ಮಿಕ, ಆಟೋ ಡ್ರೈವರ್ , ವ್ಯಾಪಾರಸ್ತ ಎಲ್ಲರೂ ಕೂಡ ವೀಕೆಂಡ್ ಕರ್ಫ್ಯೂ ಎಂದು ಮನೆಯಲ್ಲೇ ಕುಳಿತ್ತಿದ್ದಾರೆ. ಕಳೆದ 2 ದಿನ ಅವರವರ ಮನೆಯಲ್ಲೇ ಇದ್ದು ಕಾನೂನು ಮತ್ತು ಶಿಸ್ತನ್ನು ಪಾಲಿಸುತ್ತಿದ್ದಾರೆ. ಇದು ಪ್ರತಿಯೊಬ್ಬ ನಾಗರೀಕನು ಮಾಡಬೇಕಾದ ಕರ್ತವ್ಯ ಹಾಗೂ ಆತನ ಜವಾಬ್ದಾರಿ. ಆದರೆ, ನಾಡಿನ ಹಿತಾಸಕ್ತಿ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೇ, ಪ್ರಚಾರ, ವೋಟ್ ಬ್ಯಾಂಕ್ಗಾಗಿ ಹೋರಾಟ ಮಾಡುವುದನ್ನು ಬಿಟ್ಟು ರಚನಾತ್ಮಕ ಸಲಹೆ ನೀಡಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆಸಬೇಕು. ಮೇಕೆದಾಟು ಪಾದಯಾತ್ರೆ ನಿಲ್ಲಿಸಬೇಕು ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷ ಎಸ್ ದತ್ತಾತ್ರಿ ಆಗ್ರಹಿಸಿದ್ದಾರೆ.
ವೀಕೆಂಡ್ ಕರ್ಫ್ಯೂವನ್ನು ಅರಗಿಸಿಕೊಳ್ಳಲು ಹಾಗೂ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಇರುವಂತಹ ಸ್ಥಿತಿ ಇಡೀ ಕರ್ನಾಟಕದಲ್ಲಿದೆ. ಆದರೆ ಒಂದು ಸರ್ಕಾರ ಒಂದು ಆದೇಶವನ್ನು ಹೊರಡಿಸಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ಎಲ್ಲಾರು ಆದೇಶವನ್ನು ಶಿರಸಾ ವಹಿಸುತ್ತಿದ್ದೇವೆ. ಆದರೆ ಯಾರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೋ, ಯಾರು ಕಾನೂನಿನ ಬಗ್ಗೆ ಮಾತನಾಡುತ್ತಿದ್ದಾರೋ ಅವರೆ ಸಾಂಗೋಪಾಂಗವಾಗಿ ಕರೋನ ಹರಡುವಿಕೆಯಲ್ಲಿ ನಿರತರಾದರೆ ಏನು ಹೇಳಬೇಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಧಿಕಾರವಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಕಾಂಗ್ರೆಸ್ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದೆ. ಅಧಿಕಾರವಿದ್ದಾಗ ಇಲ್ಲದ ಇಚ್ಛಾಶಕ್ತಿ, ಚುನಾವಣೆಗಾಗಿ ಬಂದಿರುವ ಹಠಾತ್ ರಾಜಕೀಯ ಆಸಕ್ತಿ ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ನೀರಿಗಾಗಿ ನಮ್ಮ ಹೋರಾಟ ಎಂದ ಕೂಡಲೇ ಈ ರಾಜ್ಯದ ಜನ ಒಪ್ಪಿಬಿಡುತ್ತಾರೆ ಎಂದು ಇವರೆಲ್ಲಾ ಭಾವಿಸಿದ್ದಾರೆ. ಆದರೇ ಇದು ಕಾಂಗ್ರೆಸ್ ರ್‍ಯಾಲಿ ಅನ್ನುವುದು ಎದ್ದು ಕಾಣುತ್ತಿದೆ. ಉಳಿದ ಯಾವ ಸಂಘಟನೆಗಳು ಇವರೊಂದಿಗೆ ಕಾಣಿಸಿಕೊಂಡಿಲ್ಲ. ರಾಜ್ಯದ ಜನ ಯಾರು ಸೇರಿಕೊಂಡಿಲ್ಲ, ಜನಮಾನಸದ ಸಹ ಭಾಗೀತ್ವ ಇವರೊಂದಿಗಿಲ್ಲ. ಏಕೆಂದರೆ ಈ ಕೊರೋನಾದಿಂದ ಇಡೀ ನಾಡು ನಲುಗಿಹೋಗಿದೆ. ಅನೇಕರಲ್ಲಿ ಬೆಳಗ್ಗೆ ದುಡಿಯದಿದ್ದರೆ ಮಧ್ಯಾಹ್ನ ಅನ್ನಕ್ಕೆ ದುಡ್ಡಿರುವುದಿಲ್ಲ. ಇಂತ ಸಂಧರ್ಭದಲ್ಲಿ ಮೇಕೆದಾಟುವಿನಂತಹ ಹೋರಾಟ ಮಾಡಲು ಆರಂಭಿಸಿದರೆ ಜನ ಏನು ಮಾಡಬೇಕು ಕೂಡಲೇ ಕಾಂಗ್ರೆಸ್‌ನವರ ಪಾದಯಾತ್ರೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post