ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಠಿಣ ಪರಿಶ್ರಮದಲ್ಲಿ ಕಾರ್ಯನಿರ್ವಹಿಸುವ ಪತ್ರಿಕಾವಿತರಕರಿಗೆ ಸರ್ಕಾರದಿಂದ ಸೇವಾ ಸೌಲಭ್ಯ ದೊರಕಿಸಲು ತಾವು ಪ್ರಯತ್ನಿಸುವುದಾಗಿ ವಿಧಾನಪರಿಷತ್ ಶಾಸಕ ಡಿ.ಎಸ್. ಅರುಣ್ MLA D S Arun ತಿಳಿಸಿದರು.
ಅವರು ಕರ್ನಾಟಕ ರಾಜ್ಯ ಪತ್ರಿಕಾವಿತರಕರ ಸಂಘದ ಶಿವಮೊಗ್ಗ ಶಾಖೆ ಮೀಡಿಯಾ ಹೌಸ್‌ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಪತ್ರಿಕಾವಿತರಕರ ಕಷ್ಟನಷ್ಟಗಳು, ಸಂಘಟನೆಯ ಅನಿವಾರ್ಯತೆ ಮತ್ತು ಸರ್ಕಾರದಿಂದ ಅಸಂಘಟಿತ ಕಾರ್ಮಿಕರ ಸೌಲಭ್ಯ ದೊರಕಿಸುವ ಕುರಿತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್. ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘದ ಮಾಜಿ ಉಪಾಧ್ಯಕ್ಷ ನ.ರಾ.ವೆಂಕಟೇಶ್. ರಾಷ್ಟ್ರೀಯ ಮಂಡಳಿ ಸದಸ್ಯ ಬಂಡಿಗಡಿ ನಂಜುಂಡಪ್ಪ, ರಾಜ್ಯ ಸಮಿತಿ ವಿಶೇಷ ಆಹ್ವಾನಿತ ಜಿ. ಪದ್ಮನಾಭ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿದರು.

Also read: ವೀಡಿಯೋ ನೋಡಿ: ಅಮೆರಿಕಾದಲ್ಲಿ ಭೀಕರ ಚಳಿ ಚಂಡಮಾರುತ, 39 ಮಂದಿ ಬಲಿ
ಈ ಸಂದರ್ಭದಲ್ಲಿ ಇತ್ತೀಚೆಗೆ ಸಾಗರಟೌನ್‌ನ ರಸ್ತೆಅಪಘಾತದಲ್ಲಿ ಮಡಿದ ವಿತರಕ ಗುರುಸ್ವಾಮಿ ಕುಟುಂಬಕ್ಕೆ ಸಂಘಟನೆವತಿಯಿಂದ 25ಸಾವಿರ ರೂಪಾಯಿಗಳ ನಗದು ಸಹಾಯವನ್ನು ಪೋಷಕರಿಗೆ ವಿತರಿಸಲಾಯಿತು.











Discussion about this post