ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನತಂತ್ರ ಆಡಳಿತದ ವ್ಯವಸ್ಥೆಗೆ ಬರುವ ಯುವ ಸಮೂಹ ರಾಜಕೀಯದ ಕೊಳೆ ತೊಳೆಯುವಂತಾಗಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಆಡಳಿತ ಮಂಡಳಿ ಕಛೇರಿಯ ಆವರಣದಲ್ಲಿ ಏರ್ಪಡಿಸಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ #Independence day ಕಾರ್ಯಕ್ರಮದಲ್ಲಿ ಧ್ವಜಾರೋಹಣಗೊಳಿಸಿ ಮಾತನಾಡಿದರು.
ಸ್ವಚ್ಚ ಆಡಳಿತಕ್ಕೆ ಸುಕ್ಷಿತರ ಅವಶ್ಯಕತೆಯಿದೆ. ಮನುಷ್ಯನ ಸಾಯಿಸುವುದಕ್ಕಿಂತ, ಮನಸ್ಸನ್ನು ಸಾಯಿಸುವುದು ಭೀಕರ. ಅಹಿಂಸಾ ಚಳುವಳಿಯ ಗೆಲುವನ್ನು ಸಂಭ್ರಮಿಸುವ ಈ ಹೊತ್ತಿನಲ್ಲಿ ಸಾಮರಸ್ಯದ ಅವಶ್ಯಕತೆಯ ಬಗ್ಗೆ ಚಿಂತನೆ ಮಾಡಬೇಕಾದ ಅನಿರ್ವಾಯತೆ ಸೃಷ್ಟಿಯಾಗಿರುವುದು ದುರಂತ.
Also read: ಕಾಸಿಗಾಗಿ ಪೋಸ್ಟಿಂಗ್’ನಿಂದಲೇ ತುಂಗಭದ್ರಾ ಸರಪಳಿ ಕಟ್ | ಕುಮಾರಸ್ವಾಮಿ ಕಿಡಿ
ಸರ್ವಾಂಗೀಣ ಶಿಕ್ಷಣದಿಂದ ಮಾತ್ರ ಸಮಾಜಮುಖಿ ಬದಲಾವಣೆ ಸಾಧ್ಯವಾಗಲಿದ್ದು, ಸಂಸ್ಕಾರ ಸಂಸ್ಕೃತಿಯನ್ನು ಪೂರೈಸಲಿದೆ. ಜನಸಂಖ್ಯೆಯ ಹೆಚ್ಚಳದಿಂದ ವಸತಿ, ಆಹಾರ, ಶಿಕ್ಷಣದಂತಹ ಮೂಲಭೂತ ಅವಶ್ಯಕತೆಗಳ ಪೂರೈಕೆ ನಿತ್ಯದ ಸವಾಲಾಗಿದೆ.
ಹಸಿರ ಒಡಲನ್ನು ಬಗೆಯುವ ಕಾಯಕ ನಿಲ್ಲಬೇಕು. ಸಂಜೆಯಿದ್ದ ಊರು ಬೆಳಗಾಗುವುದರ ಒಳಗಾಗಿ ನಿರ್ಣಾಮವಾದ ಸನ್ನಿವೇಶಗಳು ನಮ್ಮ ಕಣ್ಣ ಮುಂದಿದೆ. ಪ್ರಕೃತಿಯನ್ನು ಪ್ರೀತಿಸುವ ಉಳಿಸಿಕೊಳ್ಳುವ ಜವಾಬ್ದಾರಿಯ ತುರ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಮಧುರಾವ್, ಎನ್.ಟಿ.ನಾರಾಯಣರಾವ್, ಆಜೀವ ಸದಸ್ಯರಾದ ರುಕ್ಮಿಣಿ ವೇದವ್ಯಾಸ, ಡಾ.ಎಸ್.ಟಿ.ಅರವಿಂದ, ಆನಂದ, ಗುರುಪ್ರಸಾದ್, ಜಗದೀಶ್, ರವೀಂದ್ರ.ಕೆ.ವಿ, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಸೇರಿದಂತೆ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post