ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜವಳಿ ವರ್ತಕರ ಸಂಘದಿಂದ ನಗರದ ಪಶ್ವಿಮ ಭಾಗದ ನಾಗರಿಕರಿಗೆ ಅತ್ಯಾವಶ್ಯಕವಾಗಿರುವ ಸರ್ವಸುಸಜ್ಜಿತ ಹೈಟೆಕ್ ಚಿತಾಗಾರದ ನಿರ್ಮಾಣಕ್ಕೆ ಅತ್ಯವಶ್ಯವಾಗಿರುವ ಭೂಮಿಯನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಡುವುದಲ್ಲದೇ ತದನಂತರದಲ್ಲಿ ಆರ್ಥಿಕ ಸಹಾಯವನ್ನು ಸಹ ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ತಿಳಿಸಿದರು.
ಆಲ್ಕೋಳದ ಭಾವಸಾರ ಸಂಸ್ಕೃತಿ ಭವನದಲ್ಲಿ ನಡೆದ ಜ.ವ. ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ವತಿಯಿಂದ ಸಂಸದರಿಗೆ ಅಭಿನಂದನೆ, ಗೌರವ ಸನ್ಮಾನ ಸ್ವೀಕರಿಸಿ ಸಂಸದನನ್ನಾಗಿ 4ನೇ ಬಾರಿಗೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಭೌಗೋಳಿಕವಾಗಿ ಮತ್ತು ಜನಸಂಖ್ಯೆ ಆಧಾರದಲ್ಲಿ ವಿಸ್ತಾರಗೊಂಡಿರುವ ಶಿವಮೊಗ್ಗವು ಇನ್ನೂ ಬೆಳೆಯುತ್ತಲೇ ಇದೆ. ಪಶ್ಚಿಮ ಭಾಗದ ಬಡಾವಣೆಗಳಾದ ವಿನೋಬನಗರ, ಕಲ್ಲಳ್ಳಿ, ಹುಡ್ಕೋ, ಕಾಶಿಪುರ, ಆಲ್ಕೋಳ, ಗಾಡಿಕೊಪ್ಪ, ಗೋಪಾಳ, ವಿಜಯನಗರ, ಸೋಮಿನಕೊಪ್ಪ, ಬೊಮ್ಮನಕಟ್ಟೆ ಹಾಗೂ ಇನ್ನಿತರ ಆಸುಪಾಸಿನ ಬಡಾವಣೆಗಳ ನಾಗರಿಕರಿಗೆ ಜವಳಿ ವರ್ತಕರ ಸಂಘದವರಿಂದ ಉದ್ಧೇಶಿತ ಹೈಟೆಕ್ ಚಿತಾಗಾರದಿಂದ ಅನುಕೂಲವಾಗಲಿದ್ದು, ನಿರ್ಮಾಣ ಮತ್ತು ನಿರ್ವಹಣೆಯನ್ನು ಜವಳಿ ವರ್ತಕರ ಸಂಘದವರೇ ಮಾಡಲಿರುವುದು ಶ್ಲಾಘನೀಯ ಎಂದರು.
Also read: ವಿಶೇಷಚೇತನ ಮಕ್ಕಳ ವಸತಿ ಶಾಲೆ ಶಿಕ್ಷಕರ ವೇತನ ಪರಿಷ್ಕರಣೆಗೆ ಶೀಘ್ರ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಕೇವಲ ಬಟ್ಟೆ ವ್ಯಾಪಾರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ಇಂತಹ ಸಮಾಜಮುಖಿ ಕಾರ್ಯಗಳಿಂದ ಸಾರ್ವಜನಿಕರ ಮತ್ತು ಸರ್ಕಾರದ ದೃಷ್ಟಿಯಲ್ಲಿ ಸಂಘವು ವಿಶೇಷ ಮನ್ನಣೆಗಳಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತಾಗಾರ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಮಂಜೂರು ಮಾಡಿಸಲು ಜ.ವ.ಸಂ ವತಿಯಿಂದ ನೀಡಲಾದ ಮನವಿಯನ್ನು ಸಂಸದರಿಗೆ ನೀಡಲಾಯಿತು.
ಪರ ಊರುಗಳಿಂದ ಬಂದು ಸೇಲ್ಸ್ ವ್ಯವಹಾರಗಳ ಮೂಲಕ ವ್ಯಾಪರಸ್ಥರಿಗೆ ಹಾನಿಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಸದಸ್ಯರು ವಿನಂತಿಸಿದರು.
ಸಮಾರಂಭದಲ್ಲಿ ಸುರೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಾನ್ ಭಾಸ್ಕರ್, ಡಿ.ಪಿ. ಹರೀಶ್, ಕಾರ್ಯದರ್ಶಿ ಪ್ರಭಾಕರ್, ಸಂಘದ ಖಜಾಂಚಿ ಪ್ರಮೋದ್ ಉತ್ತರ್‌ಕರ್, ಸಹ ಕಾರ್ಯದರ್ಶಿ ರಾಕೇಶ್ ಸಾಕ್ರೆ, ಅನಿಲ್ ಕುಮಾರ್ ಶೆಟ್ಟರ್, ನಿರ್ದೇಶಕ ಸಂತೋಷ್ ಸಾಕ್ರೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















