ಕಲ್ಪ ಮೀಡಿಯಾ ಹೌಸ್ | ಸೊರಬ |
ನಾಯಕತ್ವ ಎನ್ನುವುದು ಅಧಿಕಾರವಲ್ಲ. ಅದೊಂದು ಅಪೂರ್ವ ಅವಕಾಶ. ಉತ್ತಮ ತರಬೇತಿಯ ಮೂಲಕ ಕ್ರಿಯಾಶೀಲ ವ್ಯಕ್ತಿತ್ವವನ್ನು ಜಾಗೃತಗೊಳಿಸಬೇಕು. ಈ ನಿಟ್ಟಿನಲ್ಲಿ ಯೋಜಿತ ಕಾರ್ಯಕ್ರಮಗಳನ್ನು ಮಾಡಲು ತರಬೇತಿಗಳು ಅವಶ್ಯಕ ಸಂಗತಿ ಎಂದು ಹಿರಿಯ ಪತ್ರಕರ್ತ ಯು.ಎನ್. ಲಕ್ಷ್ಮೀಕಾಂತ್ ಹೇಳಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಾವಲಿ ವಲಯದ 12 ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಡೆಸಿಕೊಂಡು ಒಕ್ಕೂಟದ ಬಲವರ್ಧನೆಗೆ ಶ್ರಮಿಸುವ ಮೂಲಕ ಉತ್ತಮ ಒಕ್ಕೂಟ ಎಂದು ಹೆಸರು ಗಳಿಸಬೇಕು, ಪ್ರಸ್ತುತ ಯೋಜನೆಯ ಕಾರ್ಯಕ್ರಮಗಳಿಂದ ಹಲವಾರು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು, ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಬಲರಾಗುತ್ತಿರುವುದು ಶ್ಲಾಘನೀಯ ಎಂದರು.
ಯೋಜನಾಧಿಕಾರಿ ಸುಬ್ರಾಯ ನಾಯ್ಕ ಮಾತನಾಡಿ, ತಾಲೂಕಿನಲ್ಲಿ 76 ಒಕ್ಕೂಟಗಳನ್ನು ಹೊಂದಿದ್ದು, 2527 ತಂಡಗಳನ್ನು ಒಳಗೊಂಡಿದೆ ಎಂದ ಅವರು ಕ್ಷೇತ್ರದ ಹಿನ್ನಲೆ, ಯೋಜನೆ ಬೆಳೆದು ಬಂದ ದಾರಿ, ಯೋಜನೆಯ ಕಾರ್ಯಕ್ರಮ, ಉದ್ದೇಶಗಳು, ಕಾರ್ಯವ್ಯಾಪ್ತಿ, ಮಾಸಾಚರಣೆ ಬಗ್ಗೆ ಮಾಹಿತಿ ನೀಡಿದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕರಾದ ಉಮೇಶ, ಮೇಧಾ, ಸೇವಾ ಪ್ರತಿನಿಧಿ ಭಾನುಮತಿ, ಸುನಿತಾ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post