ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೇಪಾಳದಲ್ಲಿ ನಡೆದ ಸೌತ್ ಏಷಿಯನ್ ಏರೋಬಿಕ್ಸ್ ಹಿಪ್ ಹಾಪ್ ಅಂತಾರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಶಿಪ್ International Aerobic Championship ಸ್ಪರ್ಧೆಯಲ್ಲಿ ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನೇಪಾಳದಲ್ಲಿ ನಡೆದ ಈ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಜೈನ್ ಪಬ್ಲಿಕ್ ಶಾಲೆಯ Jain Public School ಏಳನೇ ತರಗತಿ ವಿದ್ಯಾರ್ಥಿ ವಿಶಾಲ್ ಪಿ. ಹೊಸಮನಿ ಹಾಗೂ ಎಂಟನೇ ತರಗತಿ ವಿದ್ಯಾರ್ಥಿನಿ ದಿಶಾ ಪಿಂಟು 16 ವರ್ಷದ ಒಳಗಿನ ವಿಭಾಗದಲ್ಲಿ ಭಾಗವಹಿಸಿ ಮಿನಿ ಮತ್ತು ಮೇಘ ಕ್ರೀವ್ ಹಿಪ್ ಹಾಪ್ ಎರಡು ಸ್ಪರ್ಧೆಯಲ್ಲೂ ಗೋಲ್ಡ್ ಮೆಡಲ್ ಅನ್ನು ತಮ್ಮದಾಗಿಸಿಕೊಂಡು ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ.
Also read: ಕರುಳ ಕುಡಿಯನ್ನೇ ಕೊಂದ ಸ್ಟಾರ್ಟ್’ಪ್ ಸಿಇಒ ಚಿತ್ರದುರ್ಗದಲ್ಲಿ ಅರೆಸ್ಟ್ ಆಗಿದ್ದೇ ರೋಚಕ ಸ್ಟೋರಿ
ಅಂತಾರಾಷ್ಟ್ರೀಯ ಮಟ್ಟದ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಆಡಳಿತ ಮತ್ತು ಆಡಳಿತೇತರ ವರ್ಗದವರು ಶುಭ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post