ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚೆಗೆ ತಮಿಳುನಾಡಿನ ಈರೋಡ್ ಸೆಂಗುಥಾರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಇಂಡಿಯನ್ ಪ್ಯಾರಾ ಥ್ರೋಬಾಲ್ ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಭದ್ರಾವತಿ ತಾಲೂಕು ಮಾರುತಿನಗರದ ವಿಶೇಷಚೇತನೆ ಜ್ಯೋತಿ ಎಸ್ ಮರಿಗೌಡ ಅವರು ಫೆಬ್ರವರಿ 21 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯುವ ಇಂಡೋ-ನೇಪಾಳ-ಬಾಂಗ್ಲಾದೇಶ ತ್ರಿಕೋನ ಪ್ಯಾರಾ ಥ್ರೋಬಾಲ್ ಟೂರ್ನಮೆಂಟ್‍ಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಶುಭಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post