ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರ ಸಂಪೂರ್ಣ ಅಂಗವಿಕಲವಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಕಣ್ಣೀಲ್ಲ, ಕಿವಿಯಿಲ್ಲ, ಹೃದಯವೂ ಇಲ್ಲ, ಬರೀ ಗೊಂದಲಮಯವಾಗಿದೆ. ಪರಸ್ಪರ ಅವರವರ ಹೇಳಿಕೆಗಳೇ ವಿಚಿತ್ರವಾಗಿವೆ. ಜಾತಿ ಗಣತಿ ಹೆಸರಿನಲ್ಲಿ ಹಿಂದೂ ಧರ್ಮವನ್ನೇ ಒಡೆಯಲು ನೋಡಿದರು. ವೀರಶೈವ ಧರ್ಮದಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸಿದರು. ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದರು.
ಶಾಸಕರುಗಳಿಗೆ ಮೂಗಿಗೆ ತುಪ್ಪ ಹಚ್ಚುವ ರೀತಿಯಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ರಸ್ತೆಗಳಲ್ಲಿರುವ ಗುಂಡಿ ಮುಚ್ಚಲು ಕೂಡ ಇವರಿಗೆ ಯೋಗ್ಯತೆ ಇಲ್ಲ. ಸರ್ಕಾರ ಇದೇಯೇ ಎಂಬ ಅನುಮಾನ ಮತ್ತೇ ಮತ್ತೇ ಬಲವಾಗುತ್ತಿದೆ. ನವಂಬರ್‍ನಲ್ಲಿ ರಾಜಕೀಯ ಬದಲಾವಣೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಅಷ್ಟರೊಳಗೆ ಈ ಸರ್ಕಾರವೇ ಇರುವುದಿಲ್ಲ ಎಂದರು.
ಒಂದು ಕಡೆ ಡಿಕೆಶಿ ಬೆಂಬಲಿಗರು, ಮತ್ತೊಂದು ಕಡೆ ಸಿದ್ದರಾಮಯ್ಯ ಬೆಂಬಲಿಗರು ಅವರವರೇನಾನು ಮುಖ್ಯಮಂತ್ರಿಯಾಗುತ್ತೇನೆ, ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಹೈಕಮಾಂಡ್ ನಾಯಕರು ಬಾಯಿ ಬಿಡುತ್ತಿಲ್ಲ ಎಂದರು.
ಕೆಲವು ಸ್ವಾಮೀಜಿಗಳು ವೀರಶೈವ ಲಿಂಗಾಯತ, ಪ್ರತ್ಯೇಕ ಧರ್ಮ ಎಂದು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಬಾಲಗೊಂಚಿಗಳು ಇರುವಂತೆ ಸಾಧುಸಂತರಲ್ಲೂ ಕೂಡ ಕೆಲವು ಬಾಲಗೊಂಚಿಗಳು ಇವೆ. ಇವರು ನಿಜವಾದ ಸ್ವಾಮೀಜಿಗಳು ಅಲ್ಲ, ಅವಕಾಶವಾದಿಗಳು ಇಂತವರ ಮಾತಿಗೆ ಬೆಲೆಕೊಡಬೇಕಾದದ್ದು ಇಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post