ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರಾಗಿಗುಡ್ಡದಲ್ಲಿ ನಿನ್ನೆ ಪೊಲೀಸರ ಮೇಲೆಯೇ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 30ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, 144 ಸೆಕ್ಷನ್ 144 Section ಜಾರಿ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ SP Mithun Kumar ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರ ನಂತರ ವಾತಾವರಣ ಪ್ರಕ್ಷುಬ್ಧಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದಾಗ ಕೆಲವರು ನಮ್ಮ ಮಾತಿಗೆ ಒಪ್ಪಿದರೆ, ಕೆಲವರು ಒಪ್ಪಲಿಲ. ಹುಡುಗರ ಗುಂಪೊಂದು ದಾಂಧಲೆಗೆ ಸಿದ್ಧತೆ ಮಾಡಿಕೊಂಡಿತ್ತು. ಹೀಗಾಗಿ ನಾವು ಹೆಚ್ಚುವರಿ ಬಲ ನಿಯೋಜಿಸಲಾಗಿದೆ ಎಂದರು.

Also read: ರಾಗಿಗುಡ್ಡದಲ್ಲಿ ಕಲ್ಲುತೂರಾಟ, ಸೆಕ್ಷನ್ ಜಾರಿ, ಆರ್’ಎಎಫ್ ರೂಟ್ ಮಾರ್ಚ್
ಘಟನೆಯಲ್ಲಿ ಭಾಗಿಯಾಗಿರುವ ಕೆಲವರನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಎಷ್ಟು ಜನ ವಶಕ್ಕೆ, ಎಷ್ಟು ದೂರುಗಳು ದಾಖಲಾಗಿವೆ ಎಂಬ ಬಗ್ಗೆ ತದನಂತರದಲ್ಲಿ ತಿಳಿಸಲಾಗುವುದು ಎಂದರು.











Discussion about this post