ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೀದಿ ನಾಯಿಯೊಂದು #Dog ನವಜಾತ ಶಿಶುವೊಂದನ್ನು #Neonate ಕಚ್ಚಿ ಹಿಡಿದು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಓಡಾಡಿರುವ ಆತಂಕಕಾರಿ ಘಟನೆ ನಡೆದಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಳಗಿನ ಜಾವ ನಾಯಿಯೊಂದು ನವಜಾತ ಹೆಣ್ಣು ಶಿಶುವನ್ನು ಕಚ್ಚಿಕೊಂಡು, ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಬಳಿ ಓಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲಿಸಿದ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿ, ಶಿಶುವನ್ನು ಹೆರಿಗೆ ವಾರ್ಡ್’ಗೆ ಕೊಂಡೊಯ್ದು ಪರೀಕ್ಷಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಶಿಶು ಮೃತಪಟ್ಟಿತ್ತು.
ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಆಗಷ್ಟೇ ಜನಿಸಿರುವ ಮಗುವನ್ನು ಅನಾಮಿಕರು ಮೆಗ್ಗಾನ್ ಆಸ್ಪತ್ರೆ #Hospital ಆವರಣದಲ್ಲಿ ಬಿಟ್ಟುಹೋಗಿರುವ ಶಂಕೆಯಿದೆ. ಈ ಶಿಶುವನ್ನು ನಾಯಿ ಕಚ್ಚಿಕೊಂಡು ಓಡಾಡಿದೆ.
ಮಾ.31ರಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಆಗಷ್ಟೆ ಹುಟ್ಟಿದ ಮಗುವನ್ನು ಯಾರೋ ಮೆಗ್ಗಾನ್ ಆಸ್ಪತ್ರೆ ಮಕ್ಕಳ ವಾಡ್ ಹಿಂಭಾಗ ಬಿಟ್ಟು ಹೋಗಿರುವ ಶಂಕೆ ಇದೆ. ಮಗು ಮೃತಪಟ್ಟಿದ್ದು, ನಾಯಿ ಕಚ್ಚಿಕೊಂಡು ಓಡಾಡಿದೆ. ಮಗುವನ್ನು ಅಲ್ಲಿ ಬಿಟ್ಟು ಹೋದ ತಂದೆ, ತಾಯಿ ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೆಗ್ಗಾನ್ ಆಸ್ಪತ್ರೆ ಭದ್ರತಾ ಸಿಬ್ಬಂದಿ ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post