ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಬ್ಬ ವಿದ್ಯಾರ್ಥಿಯು ಒಬ್ಬ ತಪಸ್ವಿಯಂತೆ ಎಂದು ಕುವೆಂಪು ಹೇಳಿದ್ದರು. ಉಪನ್ಯಾಸಕ ವೃತ್ತಿಯಲ್ಲಿ ಸಿಗುವಷ್ಟು ಖುಷಿ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ. ಅದು ಪವಿತ್ರ ವೃತ್ತಿ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಖಜಾಂಚಿ ಟಿ.ಪಿ. ನಾಗರಾಜ್ ಹೇಳಿದ್ದಾರೆ.
ಅವರು ಇಂದು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ 2023-24ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ಮತ್ತು ಸಾಂಸ್ಕøತಿಕ ಸಂಘದ ಉದ್ಘಾಟನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಸಂಘದಲ್ಲಿ ಮೊದಲು ಚುನಾವಣೆಗಳು ನಡೆಯುತ್ತಿದ್ದವು. ಈಗ ಅನೇಕ ಕಡೆ ಅವಿರೋಧವಾಗಿ ಆಯ್ಕೆಗಳು ನಡೆಯುತ್ತಿವೆ. ಆದರೆ ಚುನಾವಣೆ ನಡೆದಾಗಲೇ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತವೆ. ಕಾಲೇಜ್‍ನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯಲು ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ರಕ್ತದಾನ ಶಿಬಿರಗಳು, ಯುವ ಸಂಸತ್, ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳು, ಆಶುಭಾಷಣ ಮತ್ತು ಕ್ರೀಡಾ ಸ್ಪರ್ಧೆಗಳು ಹಾಗೂ ಜ್ಞಾನ ಅಭಿವೃದ್ದಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ತಜ್ಞರ ಭಾಷಣಗಳನ್ನು ಏರ್ಪಡಿಸಿ ಮಾಹಿತಿಗಳನ್ನು ಪಡೆಯಬೇಕು ಎಂದರು.
Also read: ಕಟ್ಟಡ ಸೋರುವ ಕುರಿತು ಸಚಿವ ಮಧು ಹೇಳಿಕೆ | ಆಯನೂರು ಮಂಜುನಾಥ್ ಸ್ಪಷ್ಟನೆಯೇನು?
ಸಂಘದ ನಾಯಕರು ಎಲ್ಲಾ ವಿದ್ಯಾರ್ಥಿಗಳ ಧ್ವನಿಯಾಗಿ ಕೆಲಸ ಮಾಡಬೇಕು. ಶಿಕ್ಷಕರು ಏನು ಹೇಳಿಕೊಡುತ್ತಾರೋ ಮಕ್ಕಳು ಅದನ್ನು ಮನಸ್ಸಿನಲ್ಲಿ ಹುದುಗಿಸಿಕೊಳ್ಳುತ್ತಾರೆ. ಶಿಕ್ಷಕರು ತುಂಬಾ ಶ್ರಮಪಟ್ಟು ಭವಿಷ್ಯದ ವಿದ್ಯಾರ್ಥಿಗಳನ್ನು ರೂಪಿಸಬೇಕು. ಶಿಕ್ಷಕರ ಪಾತ್ರ ದೇಶದ ಅಭಿವೃದ್ಧಿಯಲ್ಲಿ ಮತ್ತು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಮಹತ್ತರವಾದ್ದದ್ದು ಎಂದರು.
ಈ ಸಂದರ್ಭದಲ್ಲಿ ಸಾಂಸ್ಕøತಿಕ ಸಂಘದ ಉದ್ಘಾಟನೆಯನ್ನು ಎನ್.ಹೆಚ್.ಶ್ರೀಕಾಂತ್ ನೆರವೇರಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು. ವಾಯ್ಸ್ ಆಫ್ ಶಿವಮೊಗ್ಗ ವಿಜೇತರಾದ ಕು.ವರ್ಷಿಣಿ ಪಿ.ಭಟ್ ಮುಖ್ಯ ಅತಿಥಿಗಳಾಗಿದ್ದರು. ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಬೇಳೆಗದ್ದೆ ಪ್ರಭಾಕರ್, ಗೌ.ಕಾರ್ಯದರ್ಶಿ ನಾಗರಾಜ್ ನೀರುಳ್ಳಿ, ನಿರ್ದೇಶಕರಾದ ಭಾರತಿ ರಾಮಕೃಷ್ಣ, ಸುಮಿತ್ರಾ ಕೇಶವಮೂರ್ತಿ, ನಾಗೇಶ್ ಕೆ.ಎಂ., ಪ್ರಾಂಶುಪಾಲರಾದ ಡಾ. ಮಧು. ಜಿ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post