ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೂತನ ಅಧ್ಯಕ್ಷರಾಗಿ ಸೀನಿಯರ್ ಸುರೇಖಾ ಮುರುಳಿಧರ್, ಕಾರ್ಯದರ್ಶಿಯಾಗಿ ಸೀನಿಯರ್ ರತ್ನ ಲಕ್ಷ್ಮೀನಾರಾಯಣ್, ಖಜಾಂಚಿಯಾಗಿ ಸೀನಿಯರ್ ಮೃದುಲ ಮಂಜುನಾಥ್ ಅಧಿಕಾರ ವಹಿಸಿಕೊಂಡರು.
ಶಿವಮೊಗ್ಗ ಭಾವನಾಲಿಜನ್ ನ 2023 – 24ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸೀನಿಯರ್ ಪುಷ್ಪ ಶೆಟ್ಟಿ, ಸೀನಿಯರ್ ಸುವರ್ಣ ಶಂಕರ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧಿಕಾರಿಗಳಾದ ಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಅರವಿಂದ ರಾವ್ ಕೇದಿಗೆ, ಸೀನಿಯರ್ ಚಿತ್ರ ಕುಮಾರ್, ಸೀನಿಯರ್ ನವೀನ್ ಅಮೀನ್, ಭಾವನಾ ಲಿಜನ್ನಿನ ನೂತನ ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ಸಮಸ್ತ ಸದಸ್ಯರು, ನಾಗರೀಕರು, ಹಿತೈಶಿಗಳು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















