ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರ ಮತ್ತೆ ಮುಸಲ್ಮಾನರ ತುಷ್ಟೀಕರಣ ಮಾಡಲು ಹೊರಟಿದೆ. ಯಾವುದನ್ನು ಮಾಡಬಾರದೋ ಅದನ್ನು ಮಾಡುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ #MLA Chennabasappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲೀಸ್ #Police ವ್ಯವಸ್ಥೆಯನ್ನು ದುರ್ಬಲ ಮಾಡಲು ಹೊರಟಿದೆ. ಪೊಲೀಸರಿಗೆ ಕಲ್ಲು ತೂರಿ, ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ಇಂತಹ ಪ್ರಕರಣದಲ್ಲಿ ಭಾಗಿಯಾದವರ ಮೇಲಿನ ಕೇಸ್ ವಾಪಸ್ ಪಡೆಯಲಾಗುತ್ತಿದೆ. ಸುಪ್ರೀಂ ಕೋರ್ಟ್‍ಗೆ ಹೋದರೂ ಜಾಮೀನು ಸಿಕ್ಕದ ಪ್ರಕರಣ ಇದಾಗಿದೆ. ಇಡೀ ವ್ಯವಸ್ಥೆಯನ್ನು ಬುಡ ಮೇಲು ಮಾಡುವ ಕಾನೂನು ವಿರೋಧಿ ಕಾರ್ಯ. ಇದು ಅಕ್ಷಮ್ಯ ಎಂದರು.

Also read: ರೇಣುಕಾಸ್ವಾಮಿ ಕೊಲೆ ಕೇಸ್ | ಎ1 ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ | ಜೈಲೇ ಗತಿ
ಮುಂದಿನ ಸಚಿವ ಸಂಪುಟದಲ್ಲಿ ಈಗ ತೆಗೆದುಕೊಂಡ ತೀರ್ಮಾನವನ್ನು ಹಿಂಪಡೆದು ಕೇಸು ಮುಂದುವರಿಸಬೇಕು. ಇಲ್ಲದಿದ್ದರೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸುವ ಕೆಲಸ ಬಿಜೆಪಿ ಮಾಡಲಿದೆ. ಈ ರೀತಿ ನಿರ್ಣಯ ಕೈಗೊಳ್ಳುವುದಾದರೆ ಪೊಲೀಸ್ ಏಕೆ ಬೇಕು? ನ್ಯಾಯಾಲಯ ಏಕೆಬೇಕು? ಪೊಲೀಸ್ ಜೀಪ್ ಹತ್ತಿಕೊಂಡೇ ಗಲಬೆ ನಡೆಸಿದವರೆಲ್ಲಾ ಅಮಾಯಕರು ಎನ್ನುವುದಾದಾರೆ ರಕ್ಷಣಾ ಇಲಾಖೆಗೆ ಬೀಗ ಹಾಕಿ. ಇದು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ, ಎಐಎಂಐಎಂ ಸಂಘಟನೆ ಈ ಗಲಬೆಯಲ್ಲಿದೆ ಎಂಬುದು ಗೊತ್ತಾಗಿದೆ. ಆದರೂ ಇವರೆಲ್ಲಾ ಅಮಾಯಕರಾ? ಎನ್‍ಐಎ ತನಿಖೆ ನಡೆಸಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ನ್ಯಾಯಾಲಯದ ಆದೇಶ ನೀಡಿದರೆ ಪ್ರಕರಣ ವಾಪಸ್ ಪಡೆಯುವುದಾಗಿ ಈಗ ಸಿಎಂ ಧ್ವನಿ ಬದಲಿಸುತ್ತಿದ್ದಾರೆ. ಹಾಗಾದರೆ ಕ್ಯಾಬಿನೆಟ್ ತಿರ್ಮಾನ ಏಕೆ ಬೇಕಿತ್ತು ಎಂದು ಪ್ರಶ್ನಿಸಿದರು.

ಶಾಂತಿನಗರದಲ್ಲಿ ನಡೆದ ಗಲಬೆಯಲ್ಲಿ 8 ಜನರ ಮೇಲೆ ಕೇಸು ದಾಖಲಿಸಲಾಗಿತ್ತು. ಅವರ ಮೇಲೆ ಇದ್ದ ಮೂರು ಕೇಸ್‍ನ್ನು 5ಕ್ಕೆ ಹೆಚ್ಚಿಸಲಾಗಿದ್ದು, ಈಗ 12 ಜನರ ಪಟ್ಟಿಯನ್ನು ಹೊಸದಾಗಿ ಸಿದ್ದಪಡಿಸಲಾಗಿದೆ. ಅಮಾಯಕರ ಮೇಲೆ ಎಫ್‍ಐಆರ್ ಮಾಡಲಾಗುತ್ತಿದೆ. ಆದರೆ ಪೊಲೀಸ್ ಠಾಣೆಗೆ ನುಗ್ಗಿ ಹನುಮಾನ್ ಮಂದಿರಕ್ಕೆ ಕಲ್ಲು ಹೊಡೆದವರು ಇವರಿಗೆ ಅಮಾಯಕರಂತೆ ಕಾಣುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದರು.

ಕುಡಿಯುವ ನೀರು ಕೆಸರು ಮಿಶ್ರಿತವಾಗಿ ಬರುತ್ತಿದ್ದು, ಗ್ರಾಮೀಣ ಭಾಗದಲ್ಲಿ ಇಡೀ ಜಿಲ್ಲೆಯಾದಾದ್ಯಂತ ನಾಟಿ ಸಮಯವಾಗಿರುವುದರಿಂದ ವಿಪರೀತ ಮಳೆಯಿಂದಾಗಿ ಮಣ್ಣು ಮಿಶ್ರಿತ ಕೆಂಪು ನೀರು ಬರುತ್ತಿದ್ದು, ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳು ಶಕ್ತಿ ಮೀರಿ ಶ್ರಮ ಪಡುತ್ತಿದ್ದಾರೆ. ನಿನ್ನೆಯಿಂದ ತಿಳಿನೀರು ಬರುತ್ತಿದ್ದು, ಸಾರ್ವಜನಿಕರು ತಮ್ಮ ಸಂಪುಗಳನ್ನು ಒಮ್ಮೆ ಸ್ವಚ್ಛವಾಗಿರಿಸಲು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೂಡಾ ಮಾಜಿ ಅಧ್ಯಕ್ಷರಾದ ಜ್ಞಾನೇಶ್ವರ್, ಎನ್.ಜಿ. ನಾಗರಾಜ್, ಶ್ರೀನಾಗ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post