ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈದ್ಯರ ಸಲಹೆ ಇಲ್ಲದೆ ಸ್ವಯಂ ವೈದ್ಯ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದು ಮನುಕುಲಕ್ಕೆ ಅಂಟಿದ ಕಂಟಕ ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರದ ಸೂಕ್ಷ್ಮಜೀವಾಣು ವಿಭಾಗದ ಮುಖ್ಯಸ್ಥ ಡಾ. ಅಮೃತ್ ಕಿಶನ್ ಉಪಾಧ್ಯಾಯ ಅಭಿಪ್ರಾಯಪಟ್ಟರು.
ಆಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಸಪ್ತಾಹ ಅಂಗವಾಗಿ ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರದ ಸೂಕ್ಷ್ಮ ಜೀವಾಣು ವಿಭಾಗ ಹಾಗೂ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಸಹಯೋಗದೊಂದಿಗೆ ಮ್ಯಾಕ್ಸ್ ಆಸ್ಪತ್ರೆಯಿಂದ ಗೋಪಿ ವೃತ್ತದವರೆಗೂ ಆಯೋಜಿಸಲಾಗಿದ್ದ ವಾಕ್ ಥಾನ್’ ನಲ್ಲಿ ಅವರು ಮಾತನಾಡಿದರು.

ಯಾವ ಔಷಧಿಯನ್ನು ಯಾವ ಕೆಮಿಕಲ್ ಉಪಯೋಗಿಸಿ ತಯಾರಿಸಲಾಗುತ್ತದೆ ಎಂಬುದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಹೀಗಾಗಿ ತೆಗೆದುಕೊಳ್ಳುವ ಔಷಧಿಯಲ್ಲಿ ಯಾವ ಕೆಮಿಕಲ್ ಯಾವ ರೀತಿಯ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ಇಂಟರ್ನೆಟ್ ನೋಡಿ, ಮೆಡಿಕಲ್ ಶಾಪ್ ಗಳಲ್ಲಿ ಕೇಳಿ ಮಾತ್ರೆ ಹಾಗೂ ಔಷಧಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದರು.


ಈ ವರ್ಷದ Act Now: Product Our Present Secure Our Future ಎಂಬ ಈ ವರ್ಷದ ಘೋಷ ವಾಕ್ಯದ ಅಡಿಯಲ್ಲಿ ವಾಕ್ ಥಾನ್ ನಡೆಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post