ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2025ರ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದ ನಡುವೆಯೇ ನಗರದ ಹೃದಯಭಾಗದಲ್ಲಿ ತಡರಾತ್ರಿ ಭೀಕರ ಅಪಘಾತ #Accident ಸಂಭವಿಸಿದ್ದು, ಓರ್ವ ಬಲಿಯಾಗಿದ್ದಾರೆ.
Also Read>> ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ | ಸೆರೆ ಕಾರ್ಯಾಚರಣೆ | ಪತ್ತೆಗೆ ಡ್ರೋನ್ ಕ್ಯಾಮರಾ ಬಳಕೆ
ನಗರದ ಸಿದ್ದಯ್ಯ ರಸ್ತೆಯ ಸರ್ಕಲ್ ಬಳಿಯಲ್ಲಿ ತಡರಾತ್ರಿ ಕಾರೊಂದು #Car ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದಾನೆ.
ಕಾರಿನಲ್ಲಿ ಓರ್ವ ಯುವಕ, ಇಬ್ಬರು ಯುವತಿಯರಿದ್ದರು ಎಂದು ತಿಳಿದು ಬಂದಿದೆ. ಮೊಪೆಡ್’ನಲ್ಲಿದ್ದ ಯುವಕನ ತಲೆಗೆ ತೀವ್ರ ಪೆಟ್ಟಾಗಿದ್ದು ಸ್ಥಳದ¯್ಲೆÃ ಸಾವನ್ನಪ್ಪಿದ್ದಾನೆ.
ಮೃತನ ಕುರಿತು ಇನ್ನೂ ಮಾಹಿತಿ ತಿಳಿದುಬಂದಿಲ್ಲ. ಮತ್ತೊಬ್ಬ ಯುವಕನಿಗೆ ಗಂಭೀರ ಗಾಯವಾಗಿದೆ. ಇನ್ನು, ಘಟನೆ ಬೆನ್ನಿಗೆ ಸ್ಥಳೀಯರು ಕಾರಿನಲ್ಲಿದ್ದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post