ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಉಪವಿಭಾಗ ಬಿ ಕುಂಸಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ ಪ್ರಕರಣ ನಡೆದಿದೆ.
ರಜಾಕ್ ಎಂಬಾತನ ಮೇಲೆ ಕೊಲೆ ಯತ್ನ ಎನ್.ಡಿ.ಪಿ.ಎಸ್. 5 ಪ್ರಕರಣಗಳಿದ್ದು 109 ಬಿ.ಎನ್.ಎಸ್ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿ ತಲೆ ಮರೆಸಿಕೊಂಡಿದ್ದನು.
Also read: ಹಳ್ಳಕ್ಕೆ ಇಳಿದ ಕಾರು | ನಾಲ್ವರಿಗೆ ಗಾಯ | ಚಾಲಕ ಪರಾರಿ
ಇಂದು ಬೆಳಗ್ಗೆ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಆರೋಪಿಯನ್ನು ಬಂಧಿಸಲು ಯತ್ನಸಿದಾಗ ಆರೋಪಿ ರಜಾಕ್ ಪೋಲೀಸ್ ಸಿಬ್ಬಂದಿ ಅರ್ಜುನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ.
ಕೂಡಲೇ ರಕ್ಷಣೆಗಾಗಿ ಆರೋಪಿ ರಜಾಕ್ ಕಾಲಿಗೆ ಗುಂಡು ಹಾರಿಸಲಾಗಿದ್ದು ಗಾಯಗೊಂಡ ಆರೋಪಿ ರಜಾಕ್ ಮತ್ತು ಪೋಲೀಸ್ ಸಿಬ್ಬಂದಿಗಳನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post