ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವತಿಯನ್ನು ಮದುವೆಯಾಗುವುದಾಗಿ ಮತ್ತು ಆಕೆಯ ಕುಟುಂಬದ ಒಬ್ಬರಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂ. ಪಡೆದು ವಂಚಿಸಿದ್ದ ಶಿಕಾರಿಪುರದ ಯುವಕನನ್ನು ಚಿತ್ರದುರ್ಗ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಶಿಕಾರಿಪುರ ತಾಲೂಕಿನ ಜಕ್ಕಿನಕೊಪ್ಪ ವಾಸಿ ಕೀರ್ತಿಕುಮಾರ್ (30) ಬಂಧಿತ ವ್ಯಕ್ತಿ. ಈತನು ಹಲವು ಯುವತಿಯರನ್ನು ವಂಚಿಸಿರುವುದು ಬೆಳಕಿಗೆ ಬಂದಿದ್ದು, ದಾವಣಗೆರೆಯಲ್ಲಿ ಮನೆ ಮಾಡಿಕೊಂಡು ಈ ರೀತಿಯ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.
ಕೊಟ್ಟ ಹಣ ವಾಪಸ್ ಕೇಳಿದರೆ ಸಾಕ್ಷಿ ಕೇಳುವುದು ಹಾಗೂ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ಸನು. ಚಿತ್ರದುರ್ಗದ ಯುವತಿಗೆ ವಂಚಿಸಿದಾಗ ಆಕೆ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕೀರ್ತಿಕುಮಾರ್ ವಂಚನೆ ಪ್ರಕರಣ ಬಯಲಾಗಿ ಜೈಲು ಸೇರುವಂತಾಗಿದೆ.
Also read: ಮುಂಡಗೋಡ: ನೂತನ ಬಸ್ ಡಿಪೋ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post