ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೈಕ್ ಹಳ್ಳಕ್ಕೆ ಬಿದ್ದು, ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕುಂಚೇನಹಳ್ಳಿ ಕೆರೆಯ ಬಳಿ ನಿನ್ನೆ ಸಂಜೆ ನಡೆದಿದೆ.
ನಾಗೇಶ್ ಮ್ಥತ ವ್ಯಕ್ತಿ, ಸಂತೆಕಡೂರಿನ ಯುವಕರಾದ ನಾಗೇಶ್ ಮತ್ತು ದರ್ಶನ್ ಕುಂಚೇನಹಳ್ಳಿ ತಾಂಡದ ಸ್ನೇಹಿತನ ಮನೆಯಲ್ಲಿ ಊಟ ಮುಗಿಸಿಕೊಂಡು ವಾಪಾಸ್ ಶಿವಮೊಗ್ಗಕ್ಕೆ ಬರುವಾಗ ಬೈಕ್ ಹಳ್ಳಕ್ಕೆ ಬಿದ್ದಿದೆ. ನಾಗೇಶ್ ನಿಗೆ ಬೆನ್ನಿಗೆ ಬಲವಾದ ಪೆಟ್ಟುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ದರ್ಶನ್ ಕೈಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















